ಶುಕ್ರವಾರ, ಡಿಸೆಂಬರ್ 7, 2012

ನೀರಾಗ ಬಯಸುವೆ ..

 ಸೊಂಪು ಸೊಂಪು ಕಾಡು
ಇಂಪು  ಸಾಹಿತ್ಯ...
ತಂಪ ಸುರಿದು ,
ದಾರಿಯಲ್ಲಿ ದಣಿವಿಲ್ಲ,
ಸಾಗುತಿಹುದು ....

ದಿಶೆಯು  ಇರದ ಪಯಣ ,
ಎಂಥ ಸೌಖ್ಯವೋ ಕಾಣೆ ..
ಒಂದೇ ಸಮನೆ ಅತ್ತಿತ್ತ
ನುಸುಳುತಿಹುದು ..

ಸಾವಿರ ಕಣ್ಣು ನೋಡಲು
ನಾ  ಬೆಳಕು !! 
ಒಮ್ಮೊಮ್ಮೆ ಮಂಜಾಗಿ
ಕವಿಯುತಿಹುದು ...

ನೋಡೋ ಕಣ್ಣಿಗೆ ,ತಿಕ್ಷ  , ವೇಗ...
ಜ್ನಾನದಾಯಮ ನಾನು  ...
ರೆಪ್ಪೆಯನ್ಚಲಿ ಹೊಟ್ಟೆ ಕಿಚ್ಚು ..

ಬೆಳಕಿಗಷ್ಟೇ ಗೊತ್ತು ಹುಟ್ಟಿದು ..
ಹರಿಯುವ ದಾರಿ ಎಲಿಹದು ..?
ತೂರಿ ತೂರಿ ಜಗವ
ದಿಕ್ಕು ದೆಸೆಯಾ ಮೀರಿ 
ನಡೆಯುತಿಹುದು ..

ಒಮ್ಮೆ ಕಲ್ಲ  ಬಂಡೆ ..
ಒಮ್ಮೆ ಉಕ್ಕಿನ ಗೋಡೆ ...
ಒಮ್ಮೆ ತಿಳಿ ನೀರು ..
ಒಮ್ಮೆ ಗಾಜಿನ ಗೋಡೆ..
ನೀರು ಹರಿದಂತೆ ಹರಿಯುತಿಹುದು
ಅಲ್ಲಲ್ಲಿ ಕವಲೊಡೆದು ಸೋರುತಿಹುದು ...


ನೀರ ದಾರಿಗೆ ಅಂಕುಶ ,
ಕಟ್ಟಿ..
ಸ್ವಚಂದ ಹಾಸಿನ
ಹೊಳೆಯು ,
 ಕಾಲುವೆಯು..

ನಾ ಬೆಳಕು ತಿಕ್ಷ್ಣ ,
 ಅರಿತ,
ಸಂಜೆಯಾ  ಕಪ್ಪು
 ಆವರಿಸಲು
ಮುಗಿದು ಹೋಗುವೆ..

 ಸಾವಿರ ಕಣ್ಣುಗಳ
ಮಮಕಾರ ಹೊತ್ತು
ಹುದುಗಿ
ಹೋಗುವೆ ...


ಬೆಳಕ ಜನ್ಮ ಬೇಡ
ನೀರಾಗ
ಬಯಸುವೆ ..
ಅವಳಂತೆ ಹುಟ್ಟು ಸಾವಿನ
ನಿಕರತೆ ಅರಸುವೆ ...








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ