ಭಾನುವಾರ, ಡಿಸೆಂಬರ್ 16, 2012

ದೀಪ ದಿಟ್ಟಿಸಿ..!

ದೀಪ ದಿಟ್ಟಿಸಿ
 ಕಣ್ಣು ತೋಯ್ದಿವೆ
ಯಾವುದು ಆ ಧ್ಯಾನ
ದೈವ ಕಾಣದು , 
ಜೀವ ತಣಿಯದು 
ಯಾವುದಾ ಪರಮಾತ್ಮ ..

ದೀಪವಾರಿಸೆ 
ಕತ್ತಲಪ್ಪಲು 
ಎಷ್ಟು  ದ್ವಂದ್ವ,
ಅನಂತ ಭಾವದ
ಅತಿಕ್ರಮಣ ,
ನಾಳೆ ನಿನ್ನೆಯ ಒಗಟು 
ಬಿಡಿಸಲು  
ಮತಿಬ್ರಮಣ ..

ನಿನ್ನೆ ಕಳೆದಿದೆ 
ನಾಳೆ ಬಾರದೆ 
ಇಂದಿನೆಡೆಗೆ ಅಲಸ್ಯ..,
ಜೀವ ಬಯಸಿದೆ 
ಕಾಲ ನಿಲಿಸಲು 
ಎಂತದು ಈ ಮೌಡ್ಯ ..

ಹೇಗೆ ನಿಲಿಸಲ್ಲಿ 
ಕಣ್ಣ ಮುಚ್ಚದೇ 
ಹರಿದು ಮರೆಯುವ 
ನೆನಪನು ..

ನನಗು ಗೊತ್ತು ಕಾಲ 
ನಿಲ್ಲದು ..
ಇಂದು ,ಉರಿದು
ಅಳಿದು ,ಮುಗಿವುದು...
ಇಂದು  
ನಿನ್ನೆ ಆಗದಿರಲು 
ಬದುಕದಿರುವ ಶಪಥವು .

ನಾಳೆಯಾ  
ನಿನ್ನೆಯಲಿ 
ನೆನಪು ಖಾಲಿ ..
ಬಾರದು 
ಮತ್ತಾವ 
ಖಯಾಲಿ .

ದೀಪ ದಿಟ್ಟಿಸಿ ನಾಳೆ 
ಕೂರುವೆ 
ಕಾಣಲ 
ಪರಮಾತ್ಮವು..... 







2 ಕಾಮೆಂಟ್‌ಗಳು: