ಸೋಮವಾರ, ಮಾರ್ಚ್ 25, 2013

ನಿನ್ನ ಹೆಸರು ಇರಬಹುದಾ...

ಈ  ನಡುವೆ ಇಲ್ಲೆಲ್ಲ ಬೀದಿ ಬದಿಯಲ್ಲಿ ಸತ್ತವರ ಫೋಟೋ ಹಾಕಿ ಶ್ರದ್ದಾಂಜಲಿ ಅರ್ಪಿಸುವುದು ರೂಡಿ ..
ಪ್ರತಿ ಬಾರಿ ನಮ್ಮೊರ ರಸ್ತೆಗಳಲ್ಲಿ ನಡೆವಾಗ ನಾ ನನ್ನ ಫೋಟೋ ಹುಡುಕುತ್ತೇನೆ , ಪ್ರಚಾರದ  ಹುಚ್ಚೇನಿಲ್ಲ , ಫೋಟೋ ಕೆಳಗೆ ಶ್ರದಾಂಜಲಿ ಅರ್ಪಿಸಿದವರ ಪಟ್ಟಿಯಲ್ಲಿ ನಿನ್ನ ಹೆಸರು ಇರಬಹುದಾ  ಎಂಬುದಷ್ಟೆ ಕುತೂಹಲ.., ಮತ್ತದೇ ಆಸೆ ಬುರುಕ ಮನದ ಕೀಟಲೆ ...  

ಭಾನುವಾರ, ಮಾರ್ಚ್ 24, 2013

ಕಾಯುತ್ತೇನೆ ....

ಒಟ್ಟಾಗಿ  
ಕೂತು ಬಸ್ಸಿನ ಸೀಟಿನ ಹಿಂಬದಿಯ  
ಯಾರದೋ 
ಪ್ರೇಮ ಕಾವ್ಯ, ಕೆತ್ತನೆಗಳಿಗೆ 
ನಕ್ಕಿದು ನೆನಪಿದೆಯ ???
ಹೋಗಿ ನೋಡು , 
ಅಲ್ಲೊಂದು ಹೊಸ ಕಾವ್ಯ ಮೂಡಿದೆ ..!! 
ಅರ್ಧಕ್ಕೆ ನಿಲ್ಲಿಸಿದ್ದೇನೆ . 
ಪಯಣದಲ್ಲಿ ನಿನ್ನೊಟ್ಟಿಗೆ ಯಾರಿರುವರೋ ಏನೋ !!
ನೀನು ಅದೇ ಬಸ್ಸ  ಸೀಟಿನ ಹಿಂದೆ 
ನನ್ನಂತೆ ಮತ್ತೇನೋ 
ಬರೆಯಬಾರದಲ್ಲ .. ,!! 
ಇನ್ನರ್ಧ?? 
ಹಾಳೆಗೆ 
ಬರೆದು ತಲೆಗೆ 
ದಿಂಬಾಗಿಸಿ ನಿತ್ಯ 
ಒರಗುತ್ತೇನೆ ಆಸರೆಗೆ .. 
ಕನಸಲ್ಲಿ ನಮ್ಮಿಬರಿಗೂ 
ಮತ್ತೆ ವಿಚ್ಚೇದನ :(  
ಅಂದಿಗೆ  ಕಾವ್ಯ 
ಸಂಪೂರ್ಣ ಅಸ್ತಂಗತ ..,


ಮುಂಜಾನೆ ಮತ್ತೇನೋ 
ಗೀಚುತ್ತೇನೆ , 
ಹೊಸದೊಂದು  ಹಾಳೆಗೆ, 
ಈ ರಾತ್ರಿಯು 
ಕಣ್ಣ ಪರದೆಯಲ್ಲಿ  
ಸೂರ್ಯ 
ಉದಯಿಸುತ್ತಾನೆ.. 
 ಕ್ಲೈಮಾಕ್ಸ್ 
ಬದಲಾಗಬಹುದು 
ಎಂದು ಕಾಯುತ್ತೇನೆ ..,
 
ನನ್ನ ದೂಷಿಸಬೇಡ ... 
ಅಸೆ ಬುರುಕ ಮನದ 
ಕೊನೆಯ 
ತುಂಡು ಇನ್ನು 
ಉಳಿದಿದೆ 
ಅದೇ  ಆರೋಪಿ ..,   

ಬಸ್ಸ ಸೀಟಿನ ಹಿಂಬದಿಯ 
ಕಾವ್ಯ ನಾ ಹೇಗಾದರೂ 
ಮುಗಿಸಬೇಕ್ಕಲ್ಲ :( 
ಅದರೊಟ್ಟಿಗೆ ಕಾಲಚಾಚಿ 
ಕಾಯುತ್ತೇನೆ .... 

 




ಬುಧವಾರ, ಮಾರ್ಚ್ 20, 2013

ಜಾಗ್ರತೆ !!

ನೀ ನಡೆವ ರಸ್ತೆಗಳಿಗೆ ಡಾಂಬರು ಹಾಕುವವನ ಪರಿಚಯ ಮಾಡಿಕೊಂಡಿರುವೆ , ನಿನಗೆಂದು ದಾರಿಯ ಅಂಚುಗಳುದ್ದಕ್ಕು
ಎಂತದೋ ಮೇಣದಂತ ಮಣ್ಣಾಕಿಸಿ  ದಾರಿ ಮೆದುವಾಗಿಸಿದೇನೆ  , ದಾರಿ ಸವೆಸುವುದು ನಿನಗೆ ಇನ್ನು ತ್ರಾಸವಾಗದಿರಲಿ .
 ನಾನಿಲ್ಲದ ಪಯಣ,   ಒಂಟಿತನ ಕಾಡಬಹುದು  , ರಸ್ತೆ ಬದಿಯ ಮರಗಳೆಲ್ಲ ಮಾತು ಕೊಟ್ಟಿವೆ ಒಂದಷ್ಟು ಎಲೆ ಉದುರಿಸಿ ನಿನ್ನ ಹಿಂದೆ ಕಳಿಸುವುದೆಂದು ,ಗಾಳಿಗಂಟಿ ನಿನ್ನ ಹಿಂಬಾಲಿಸೀತು , ಬೆಚ್ಚಬೇಡ . ತಾ ಅನಾಥವಾದರು ನಿನ್ನಗಾಗಿ ಉರುಳುತ್ತವೆ , ಅಲಲ್ಲಿ  ನೇವರಿಸು ಅವುಗಳ,  ನಿನ್ನ ತಾಯ್ತನ ಜರುಗಲಿ .

ಆ ದಾರಿ ಎಷ್ಟು ದೂರದ್ದೋ ನಾ ಅರಿಯೆ , ನೀನೆ ಆರಿಸಿದ್ದು , ನನಗೆ ಗೊತ್ತು ನೀನು ಆ ದಾರಿಗೆ ಅಪರಿಚಿತೆ .
ನನ್ನ ಕಣ್ಣೋಟಕ್ಕೆ ಮಿತಿ ಇದೆ ಮಿತಿ ಮೀರಿ ದಿಟ್ತಿಸುತ್ತಿರುವೆ , ಇನ್ನು ಸ್ವಲ್ಪ ಮುಂದೆ ಹೋದ ಮೇಲೆ ನೀ ಕಾಣುವುದಿಲ್ಲ ,ನಾ ಕಾಯಲಾರೆ ,  ಜಾಗ್ರತೆ !!

ನನ್ನ ಕಣ್ಣಿಗೆ ನಡೆದು ಹೋದದ್ದು ನೀನಾ , ಇಲ್ಲ ದಾರಿಯ ಎಂಬುದು ಬದುಕು ಪೂರ ಬಿಡಿಸಬೇಕಾದ ಒಗಟು .

ಒಮ್ಮೊಮ್ಮೆ ಕಾಲು ನಿಂತಲ್ಲೇ ಅಂಟಿದಕ್ಕೆ ಖೇದವಿದೆ , ಆದರೆ ಸ್ತಂಬನ ಹಿತ ಎನ್ನಿಸಿದೆ , ಇಲ್ಲಿ ನೀ ಕೊಟ್ಟದ್ದು , ಇಟ್ಟದ್ದು , ಬಿಟ್ಟದ್ದು ಎಲ್ಲ ಇದೆ ನಿನ್ನ ಹೊರತು .
ನೀನು ಕನಸುಗಳಲ್ಲಿ ಬರುವೆ ಎಂದು ಮಾತು ಕೊಟ್ಟಿದ್ದೆ , ನೆನಪಿಲ್ಲವ ? ಇರಲಿ ನೀ ಹೊರಟಾಗ ನನ್ನ ನಿದ್ದೆ ನಿನ್ನ ಕಾಲಿಗಂಟಿ ಹೊರಟ್ಟದ್ದು ನೆನಪಿದೆಯ ?? ಸಾದ್ಯವಾದರೆ  ಹಿಂತಿರುಗಿಸು :(

ಕನಸಿಲ್ಲದ ನನಗೆ ನೀ ನೆನಪಿನ್ನಲ್ಲೇ  ಸಂಭವಿಸುವೆ , ಆದರೂ  ನನಗೆ  ಕನಸೆಡೆಗೆ ಮೋಹ ,ಅಲ್ಲಿ  ನಾಳೆ ನಿನ್ನಿಲ್ಲದೆ ನೀ  ಹುಟ್ಟಬಲ್ಲೆ ,  ಪ್ರಾಯಶಾ .

ನಿದ್ದೆಗೆ ಇಲ್ಲೊಂದು ತಪ್ಪಸ್ಸು ನಡೆಯುತ್ತಿದೆ , ಕಲ್ಪನೆಗಳಿಗಿಂತ ಕನಸು ಹಿತ ಎಂಬ ನಿಜವಷ್ಟೆ ಕಾರಣ . ಕಲ್ಪನೆಗೆ ಮಿತಿ ಇದೆ ಬುದ್ದಿಯದ್ದು , ಕನಸಿಗೆ ?? ಹಾ .ಅ ವೇಗ , ಆ ವಿಸ್ತೀರ್ಣ , ಸಾಟಿ ಇಲ್ಲ .

ನಿದೆರೆ ಹಿಂತಿರುಗಿಸು .

ನಾಳೆಯ ಬೇಡಿಕೆಗೆ ತಾನೇ ನಾನು ನನ್ನ ನಿನ್ನೆಗಳ ನಿನಗೆ ಲಂಚಇತ್ತದ್ದು ?
ಒಂದು ಕ್ಷಣ ಯೋಚಿಸಿದರೆ ಮನುಕುಲ ಇಂದಿನೆಡೆಗೆ ಎಸೆಯುವ ಎಲ್ಲ ಕಸುವು ನಾಳೆಯ ಅಸ್ಪಷ್ಟತೆಯ ನಿಖರತೆಗೆ ತಾನೇ ??ನಿನಗೆ ಸ್ವಾರ್ಥ ಕಂಡಿತ್ತ ? ಇರಲಿ ಇಲ್ಲೊಂದು ದೀಪ ಕತ್ತಲಲ್ಲಿ ಕಳೆದಿದೆ ಹುಡುಕಲು ಕಣ್ಣಿಲ್ಲದ ನಾನು ಹರಕೆ ಹೊತ್ತಿರುವೆ , ಉಸಿರ ದೀಪ ಉರಿವವರೆಗೂ ಹುಡುಕೋಣವಾಗಲಿ  .

ಇರಲಿ , ನಿನಗೆ ಸಂತಸ ,ಗೆಲುವು  ಅಷ್ಟೇ ನಾ ಬಯಸಿದ್ದ  ವರ ,  ನಿನ್ನ ಸಂಗಾತ ನಾನು ಎಂದು ಬೇಡಲೇ ಇಲ್ಲ , ಇಂದು  ದೈವ ದೂರುವುದು ತಪ್ಪಾದೀತು , ನಾನು ನಿಸ್ವಾರ್ಥಿ ??

ನೀ ನಡೆದು ಹೋದ ದಾರಿ ವಿಚಿತ್ರ ,  ಅದಕ್ಕೆ ಹುಟ್ಟು , ಸಾವು ದ್ವಂದ್ವದ್ದು .
 ಇಲ್ಲಿ ನಿಂತ ನನಗೆ ನೀ ಯಾವುದೊ ತೀರಕ್ಕೆ ಹರಿದು ಹೋದ ನದಿ , ನಾನು ಎಲ್ಲೋ ದಾರಿ ಮಧ್ಯೆ ಆಸರೆಯಾಗಿದ್ದ ದಡ ??
ಇಲ್ಲ ನದಿ ಎನ್ನಲಾರೆ ಅವು ಏಕ ಮುಖಿ . ನೀನು ನಡೆಯುತ್ತಿರವ ದಾರಿಗೆ ಹುಟ್ಟಿದೆ ನೀನು ದಿಶೆ ಬದಲಿಸಿದರೆ ನಾನು ನೀ ಸೇರಬೇಕಾದ ತೀರ :)ನದಿಯಲ್ಲ ನೀ ...

ದಾರಿಯುದ್ದ ನಾ ಕೊಟ್ಟ ಕವನಗಳ ಹೋದುವೆಯ ?? ಅದೊಂದ ಮಾಡದಿರು . ನೀನು ಬೆಳಕು ನನ್ನ ಕವನದಿ ನನ್ನ ಬಾಳ ಕತ್ತಲು ಕಂಡೀತು , ನೀ ಇಲ್ಲಿ ಮತ್ತೆ ಹರಿಯಬಾರದು , ನಿನ್ನ ದಾರಿಯ ತೀರದಲ್ಲಿ ನೀ ಬಯಸಿದ ನಿಧಿ ನಿಕ್ಷೆಪಕ್ಕೆ ವಿರಹವಾದೀತು .

ನಿನ್ನ ಮರೆವ ನೋವು ನನ್ನ ಶತ್ರುವಿಗು ಬೇಡ ಎಂದು ವರ ಪಡೆದಿದ್ದೇನೆ , ನನಗು ಗೊತ್ತು ನೀನು ಬರಲಾರೆ ,
 ಹಾಗೆ ಸುಮ್ಮನೆ ಸ್ವಗ್ತಿಸುತ್ತೆನೆ , ಆತ್ಮ ರತಿ ...








ಶುಕ್ರವಾರ, ಮಾರ್ಚ್ 15, 2013

ಒಬ್ಬಂಟಿಯಲ್ಲ ...

ಅಲ್ಲಿಯ  ಮಳೆಗೆ
ಇಲ್ಲಿ
ಒದ್ದೆಯಾಗುವ
ತೃಷೆ
ಅಲ್ಲಿಯ
 ಉರಿಗೆ
ಬೆವರಾಗುವ  ತೃಷೆ ,
 ವಾಸ್ತವ ??!!
ನಿಮ್ಮ
ಊರಿಗೆ
ಮೋಡಗಳು
ಹರಿಯುವುದು
ನಮ್ಮ
ಕೇರಿಯ ಮೇಲೆ..
ಮನೆಯಾಚೆ ನಿಂದು
ರವಿಯ
ಅರಸುತ್ತೇನೆ ಅನುದಿನ,
ನೀ ಹೊಯ್ದ ಬೆಳಕು..
ಅವನದಕ್ಕೆ ಹೋಲಬಹುದು ??
ಕೊಂಚ ಸಾಲ
ಪಡೆಯುವದಷ್ಟೇ  ಕಾರಣ ..

ನಿನ್ನೆಗೆ ಕಣಜ ತುಂಬಿದೆ,
ಎರವಲು ಬೆಳಕಿನ ಸರಕು  ..
ನಿನ್ನೆಸರಲ್ಲಿ ಇಲ್ಲಿ ಉರಿಯಲಿ
ಅನಂತ  ಮಿನುಗು ...

ಆದರು ಚಟ??
ಇಂದು  ಕೂಡ ಆಗಸ
ದಿಟ್ಟಿಸುತ್ತಿರುವೆ  ,

ಎಂದಿನಂತೆ
ಇಂದು
ರವಿ ಕಾಣುತ್ತಿಲ್ಲ :(

ಆಗಸ ದಿಟ್ಟಿಸಿ
ಹಾಗೆ ಕೂತೆ ...
ಬರಿ ಮೊಡಗಳದ್ದೆ
ಸಂತೆ...
ಒಂದಷ್ಟು ಮೋಡಗಳು
ಗುಂಪು ಕಟ್ಟಿ
ಪಿಸುಗುಟ್ಟುತ್ತಿವೆ..
ದ್ವಂದ್ವದ ಮಾತು
ಅರ್ಧಕ್ಕೆ
ನಿನ್ನ
ಸೇರುವ ಆಸೆ.
ಅರ್ಧಕ್ಕೆ
ನನ್ನ
ಸೇರುವ ಆಸೆ ..
.ಒಂದಷ್ಟು
ಬೆಳ್ಳಿಯಂತವು
ನಿಮ್ಮೂರ
ದಾರಿ ಹಿಡಿದವು
ಒಂದಷ್ಟು
ಕಪ್ಪಿನಂತವು
ಇಲ್ಲೇ
ಇಳಿದು
ಭೋರ್ಗರೆದವು  
ಅವಕ್ಕೆ
ನನ್ನ ತೆಕ್ಕೆಗೆ ಇಂಚಿಂಚು  ಇಳಿದು
ನೀ ಹಚ್ಚಿದ
ಬೆಂಕಿ ನಂದಿಸಲು ಶ್ರಮಿಸುವ
ಚಟ
ನಾ
 ಒದ್ದೆಯಾಗುವುದು
ಅವಕ್ಕೆ ಮುಕ್ತಿಯ ದರ್ಶನವಂತೆ !!!


ನಿನ್ನ ಅರಸಿ
ಹೋದ ಬೆಳ್ಳಿಯವಲ್ಲವೇ
ನನ್ನವು ??
ಒದ್ದೆ ಅಸ್ಪರ್ಶ್ಯ
ನಿಮ್ಮೂರ
ಶೆಕೆಗೆ  ಬೆವರಾಗುತ್ತೇನೆ ..
ಅಲ್ಲಿಗೆ  ದುಖಕ್ಕೆ
ಅಮೃತ  ಪಾನ,,
ನೀ ಹಚ್ಚಿಟ್ಟ ಉರಿ
ಚಿರಾಯು ..



ನನ್ನ ಕೇರಿಗೆ
ಇಳಿದ ಕಾರ್ಮೋಡಗಳು ??
ಇಲ್ಲೇ ಅಡ್ಡಡುತ್ತವೆ
ಅವಕ್ಕೆ ಸೋತ ಭಾವ ,,

ಈಗ ನಾನು
ಒಬ್ಬಂಟಿಯಲ್ಲ
ಇಲ್ಲಿ ಒಂದಷ್ಟು
 ಅತ್ರಪ್ತ
ಆತ್ಮಗಳಿವೆ ಮೋಡಗಳವ್ವು ..
ಅವುಗಳಿಗೆ
ಸಾಂತ್ವನವಾಗಿ
ದಿನ ನಿನ್ನ ಕತೆ ಹೇಳುತ್ತೇನೆ


ಈಗ ಆಗಸ
ನೋಡುವುದ ಬಿಟ್ಟಿದೇನೆ
ರವಿಯ ಬೆಳಕು ?
ಮೋಡಗಳ ದಾರಿ ?
ಯಾವುದು ಅರಿಯೆ
ನಿಮ್ಮೊರಿನಲ್ಲಿ ಈಗ ಶೆಕೆಯೋ ??
ಮಂಜ ಹೊದಿಕೆಯೋ ??

ಇಲ್ಲಿ ಸುಡು ಬೇಸಿಗೆ
ಆತ್ಮ ಉರಿಸಿ ಉರಿಸಿ ಇಲ್ಲೊಂದಿಷ್ಟು
ಬೂದಿ ಉಳಿದಿದೆ.
ನಮ್ಮೂರ ನದಿ ಮಾತು ಕೊಟ್ಟಿದೆ!
ನಿನ್ನ ಕಾಲಿಗೆ ಹೇಗಾದರೂ ಆ  ಬೂದಿ
ತಾಕಿಸುವೆನೆಂದು ..
ಹಾಗಾಗೆ ಹಿಂತುರುಗಿ
ನೋಡು :(

ನಿನಗೆ
ನನ್ನ ಹೆಜ್ಜೆ ಗುರುತು
ಕಂಡರೆ
ನನಗೆ
ನನೊಂದಿಗೆ
 ಕಾಯುತ್ತಿರುವ
ಕಾರ್ಮೋಡಗಳಿಗೂ
ಮುಕ್ತಿ .... :(


ಭಾನುವಾರ, ಮಾರ್ಚ್ 3, 2013

ನಿನ್ನ೦ತೆ ಮೇಣ

ನಿನ್ನ
ಮೊಗವೊಂದೆ
ಮಿನುಗಲೆಂದು 
ನಿನ್ನ ಮುಂದೆ 
ಕ್ಯಾಂಡಲ್ ಹಚ್ಚಿ 
ನಾ ನಿನ್ನೆದುರು 
ಕೂರುತ್ತಿದದ್ದು 
ನೆನಪಿದೆಯ ??

ಎಷ್ಟೋ ಬಾರಿ 
ಅಮಾವಾಸ್ಯೆಗೆ , 
ದಟ್ಟ ಕತ್ತಲಿಗೆ 
ಹಂಬಲಿಸಿದ ಆ 
ರಾತ್ರಿಗಳು ?? 
ನಿನ್ನ ಚಂದ್ರನನ್ನಗಿಸಿ 
ಕಂಡ ಬೆಳದಿಂಗಳು .., !!

ನೀ 
ಹೋದಮೇಲೆ
ಆ ಕ್ಯಾಂಡಲ್ 
ನಿನ್ನಗೆಂದು 
ಅತ್ತು ಅತ್ತು 
ನೆಲದ ಮೇಲೆ 
ಮಡುಗಟ್ಟಿದೆ ...:( 

ಸೋರಿದ 
ಅಷ್ಟೂ ಮೇಣ 
ಒಟ್ಟಾಗಿಸಿ 
ಒಂದು ಬಟ್ಟಲಲ್ಲಿ 
ಇಟ್ಟು ದಿನ
ಉರಿಸುತೇನೆ .., 
ಉಸಿರ ಮಸೆದು 
ಬತ್ತಿ ಮಾಡುತ್ತೇನೆ 
ಬತ್ತಿಯಂತೆ  
ಉರಿಯುತ್ತೇನೆ .., 
ಬತ್ತಿ 
ಬದಲಿಸುತ್ತೇನೆ ... 
ಉರಿದಾಗಲೆಲ್ಲ 
 ಮೇಣದಲ್ಲಿ 
ನಿನ್ನ ನೆನಪುಗಳ 
ಮೆದುವಾಗಿಸುತ್ತೇನೆ .. !








...  










.. 
ಕತ್ತಲಾರಿಸಲು...