ಎಲ್ಲೋ ಇರುವ
ಮಳೆಯ
ಮೋಡ ಹೊತ್ತು
ತಂದು
ಹೊತ್ತು ಮುಳುಗೋ
ಹೊತ್ತಲ್ಲಿ
ಎರಚಿ ಹೋಗಿ ..
ಬೆಳೆದು ನಿಂತ
ಪೈರು
ಬೇರು ಆಚೆ
ಬಂದು
ನಲುಗಿ ಜರುಗಿ...
ಉಳಿದ ಕೊನೆಯ
ಮೊಳಕೆಯು
ಮುದುಡಿ
ಪಸಲಿಲ್ಲ ,ಅಸಲಿಲ್ಲ
ಎಂತ ಮುನಿಸದು
ಮೋಡ ,
ಯಾಕೆ
ಸುರಿದು ನಿಂತೇ ?
ಎಂತ ಕಾವು
ರವಿಯೇ
ರವಿಯೇ
ಮೊಡವ
ಇಲ್ಲಿಯವರೆಗೂ
ಬಿಟ್ಟೆ ...
ಇಲ್ಲಿಯವರೆಗೂ
ಬಿಟ್ಟೆ ...
ಮೋಡದ
ಮರೆಯಲ್ಲಿ
ಮರೆಯಲ್ಲಿ
ಇಣುಕಿರುವ
ದೊರೆಯೇ ?
ಯಾಕಿಂತ
ಯಾಕಿಂತ
ಮುನಿಸಾಯಿತು ..
ಮತ್ತೆ ತೊರೆ ತುಂಬಲಿ
ಎಂದರಸೊ
ಪೂಜೆ ಬಾಗಿನಕು
ಮತ್ತೆ ತೊರೆ ತುಂಬಲಿ
ಎಂದರಸೊ
ಪೂಜೆ ಬಾಗಿನಕು
ಬರವಾಯಿತು ..
ಇನ್ನು ಕಾಯುವುದು ಮಾತ್ರ
ಎನ್ನ ದೆಶೆಯು ,
ಎನ್ನ ದೆಶೆಯು ,
ಉಳಲು
ನೇಗಿಲ ಕಟ್ಟಿ
ಹೂಳಲು
ಬಿಜವ ಹೆಕ್ಕಿ ,
ಕಾಯುವೆ
ಅದೇ ಮಳೆಗೆ
ಅದೇ ಮಳೆಗೆ
ವರುಷ ಸವೆಸು ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ