ಮಂಗಳವಾರ, ಡಿಸೆಂಬರ್ 30, 2014

ಪಾಳು ಮನೆಯಾದರು..

ಸಿಡಿಲಿಗೆ  ಅರ್ಧ 
ಉರಿದ ಮರ
ಪ್ರತಿರೋಧವಿರದೆ 
ಒಣಗುತ್ತಿರುವೆ  , 

ಪಾಳು ಮನೆಯಾದರು  ಬೇಕು  .  
ಅಲ್ಲಿನ ಹೆಂಚಿಗೆ ಆಸರೆ  , 
ಬಾಗಿಲು  ಕಿಟಕಿಗೆ ಮೈಯಿ  ..,  
ನೆಲಕ್ಕೆ ಹೊಸ್ತಿಲು ., 
ಒಲೆಗೆ ಹೊಗೆ ಗೂಡು , 
ಯಾವ ಖಾಲಿತನವಾದರು 
ಪೂರೈಸುವೆ .., 
ಫಲಾನುಫಲಕ್ಕೆ 
ಒಂದಷ್ಟು ಆತ್ಮ ರತಿಯ 
ಗಂಟು ಸಾಕು ..,


ಅರ್ಧ ಬೆಂದಿದೆ ಬೇರು ,
ನಡುವು ಅರ್ಧ ..,
ಎಲೆಗಳಿಗೆ ಇಬ್ಬನಿಯು 
ದಕ್ಕುವುದು ಕಾಣೆ ., 
ರವಿಯ ಬೆಳಕ ಅದು 
ಮುಕ್ಕುವುದು ಕಾಣೆ ., 

ಅಪ ಮೃತ್ಯುವಂತದ್ದು ಎರಗಿ 
ಮುಕ್ಕಾಲು ಜೀವ ಸೊರಗಿ  .,
ವ್ಯವಹಾರ ಹಪಹಪಿಯಲ್ಲಿ 
ಕಾಲು ಜೀವ  ಕೊರಗಿ .., 

ಆತ್ಮ ಹತ್ಯೆಗಾದರು ಸರಿ 
ಪಾಳು ಮನೆಯಾದರು  ಬೇಕು  ..... 

ಸೋಮವಾರ, ಡಿಸೆಂಬರ್ 22, 2014

ಎಡೆ

ಒಂದಿಷ್ಟು ಕನಸು
ಕೊಂದ್ದಿದೇನೆ
ರಕ್ತ ಕೈಗಂಟಿದೆ ,
ಪಶ್ಚಾತಾಪಕ್ಕೆ
ಕವಿತೆಗಳ
ಎಡೆ ಇಡುತ್ತೇನೆ .. 

ಶನಿವಾರ, ಡಿಸೆಂಬರ್ 20, 2014

ಪ್ರಾರ್ಥನೆ ...

ಹಿಂದೆ ಎಂದೋ ಬರೆದ ಸಾಲುಗಳೆಲ್ಲ ಅಪರಿಚಿತ ಎನ್ನುವಷ್ಟು ಬದುಕು, ಮನಸ್ಥಿತಿ ಬದಲಾಗಿದೆ , ನನ್ನದೇ ಬರಹಗಳು ನನ್ನ ಅಣಕಿಸುತ್ತಿವೆ , ನೋವಿನ ತೀಕ್ಷ್ಣತೆ , ಭಾವಗಳ ಉತ್ಕಟತೆ ಎಲ್ಲ  ಈಗ ತಳ ತಲುಪಿವೆ  . ಅಂದು ಇಡಿಯಾಗಿ ಆವರಿಸಿದ್ದ ಚಿಂತೆಗಳ ತೊಳಲಾಟಕ್ಕೆ ಒಂದು ನಿರ್ದಿಷ್ಟ ಹಾದಿಯಿತ್ತು,  ಈಗೆ ಆರಂಭವಾಗಿ ಈಗೆ ಮುಗಿಯುವ ಅದೃಶ್ಯ ಹಳಿಗಳ ಜಾಲವಿತ್ತು , ಆ ಜಾಲದಲ್ಲೇ ಗಿರಕಿ ಹೊಡೆಯುತ್ತಾ  ಕಳೆಯುತ್ತಿದ ಸಮಯ, ಮತ್ತೆ ಮತ್ತೆ ತುಳಿದ ಹಾದಿಯ ಅನುಕರಿಸಲು ಮಾಡಿದ ವ್ಯರ್ಥ ಯತ್ನ , ಅಸಾಧ್ಯ ಎನುವಷ್ಟೂ ಖಿನ್ನತೆ , ಮ್ .. ಆ ಕ್ಷಣಕ್ಕೆ ಅಲ್ಲಿಂದ ನಾ  ಮುಕ್ತನಾಗುವುದು ನನ್ನ ಸುತ್ತಲಿನವರು ಬಯಸಿದ , ನಾನು ಎಂದು ಬಯಸದ ಬೌದ್ದಿಕ ಕಾದಾಟ . ಒಂದು ಹಂತಕ್ಕೆ ಚಿಂತನೆಗಳಿಗೆ ಏಕತಾನತೆ ಕಾಡಿತೇನೋ ಅವೇ ಏಕಾಗ್ರತೆ ಕಳೆದುಕೊಂಡು ಸಡಿಲವಾಗಿ ಹರಡಿ ಹೋದವು, ನಾ   ನನ್ನನ್ನೇ ಕೆತ್ತಿ  ಬರೆಯುತಿದ್ದ ಕವನಗಳಿಗೆ ಇಟ್ಟ ವಿರಾಮ ಕೂಡ  ನೆನಪ ದೇಹ ವಿಸರ್ಜನೆಗೆ ಪೂರಕವಾಯಿತು.
ನಿಸ್ತೆಜಗೊಂಡ ದುಃಖಕ್ಕೆ ವಿಮುಖನಾಗಿ ಹೊಸದೊಂದು ದಾರಿ ಅರಸಬೇಕ್ಕಿತ್ತು  , ಹಾಗೆ ಹುಡುಕ ಹೋರಾಟ ದಾರಿಯಲ್ಲಿ ಮದುವೆ , ಮಗು ಹೊಸದೊಂದು ನಿಲ್ದಾಣ . ಈಗೆ ಸಿಕ್ಕ ನಿಲ್ದಾಣಗಳೆಲ್ಲ ತಲುಪಿ ಸೇರಬೇಕಾದ ಗೊರಿಗಳಾಗಿಬಿಟ್ಟರೆ  !  ಹಾಹ್! ಎಲ್ಲರ ಬದುಕು ಸುಖಾಂತ್ಯ . ಆದರೆ ಹಾಗಾಗದು , ಸಿಕ್ಕ ನಿಲ್ದಾಣ ಮತ್ತು ಅವುಗಳೊಳಗಿನ ಸಾಂತ್ವಾನ ಅರೆ ಕ್ಷಣದ   ಮೋಹದಷ್ಟೇ ಅಲ್ಪಾಯುಷಿ . ಮತ್ತೆ ಹೊಸ ಹುಡುಕಾಟಗಳು , ಗೊಂದಲಗಳ ತಡಕಾಟ , ಏಕಾಗ್ರತೆಯಿಂದ ಚಿಂತೆಗಳ ಸುಳಿಯಲ್ಲಿ ಗಿರಕಿ ಹೊಡೆಯುವ ಅದ್ಭುತ ಧ್ಯಾನ ಮತ್ತು ಅದು ತೋರಿಸುವ ಭೌತಿಕ ನೀರ್ವಾಣದ ಆಮಿಷ ...  ಯಾಕೋ ಈ ನಡುವೆ ಅಂತಹ ಯಾವ ಮೋಹವು ನನಗೆ ದಕ್ಕುತ್ತಿಲ್ಲ , ಯಾವ ದಾರಿ ತುಳಿದರು ನಾಲಕ್ಕು ಹೆಜ್ಜೆಗೇ  ಕಾಡುವ ನೀರಸತೆ , ವೈರಾಗ್ಯದಂತಹ ಸೋಮಾರಿತನ , ಎಂತದೋ ಜಡತ್ವ . ಎಲ್ಲ ಹೊಸ ಪ್ರಯತ್ನಗಳು ಯಾವುದೋ ಓಟದ  ಆಟಕ್ಕೆ ನೋಂದಣಿ ಮಾಡಿಸಿದಂತೆ ಭಾಸವಾಗುತ್ತದೆ , ಓಡುತಿರುವವರ  ಬೆನ್ನ  ಮೇಲೇ   ಬೆವರು ಮಾಡಿಕೊಂಡ ದಾರಿ , ಉಳಿಸಿದ ಕಲೆಯ ಕೊರೆತ ,  ಅಂತ್ಯವೇ ಇಲ್ಲದ ಓಟಕ್ಕೆ ಬೆನ್ನು ತೋರಿಸಿದಕ್ಕೆ ಸಮರ್ಥನೆ ಕೊಟ್ಟು ತಲೆ ನೇವರಿಸುತ್ತವೆ . ಕುಳಿತರೆ ? ನಿಂತಲ್ಲಿ ನಿಂತರೆ ? ಜಡತ್ವ .. ಹರಿದರೆ ಬದುಕು , ನಿಂತರೆ ಜೀವಂತ ಹೆಣ , ನಾವೇ ಹೊರಬೇಕಾದ , ಯಾರು ಕಣ್ಣೀರ ಮುಯ್ಯು ಹಾಕದ ಹೆಣ (ಜನರ ಮುಯ್ಯಿ  ನನಗೆ  ಸಾಮಾಜಿಕ ಪ್ರಸ್ತುತತೆಯ ತೋರುಗನ್ನಡಿ ),  ಸಾಯುವ ಮೊದಲೆ ಹೆಣವಾಗುವುದು ಹೇಸಿಗೆ .  ಮತ್ತೆ ನನ್ನ ಸಂಬಾಳಿಸಿ  ನಾನೇ ಪುಟಿಯುತೇನೆ ಆ ದಾರಿಗಳೆಲ್ಲ ಕವಲಾಗುವ ವೃತ ತಲುಪುತ್ತೇನೆ  , ಮತ್ತೆ ಸುತ್ತ ದಿಟ್ಟಿಸುವುದು ವ್ಯತ್ಯಾಸವೇ ಇಲ್ಲದ ದಾರಿಗಳ ಮಧ್ಯೆ ತರ್ಕಬದ್ದ ಆಯ್ಕೆಗೆ ಚಡಪಡಿಸುವುದು .


ಪ್ರಾರ್ಥನೆ
 ಇಗೋ ನನ್ನ ಪೂರ್ತಿ
ಮಾಡುವ ಸವಾಲುಗಳೆ ,
ಎಲ್ಲಿರುವಿರೋ ,
ಒಟ್ಟಾಗಿ  ಬನ್ನಿ ,
ಉತ್ತರ ಹುಡುಕುವ  ..,
ಕೂತು ಹರಟುವ ,
ಒಂದು ವಿಮರ್ಶೆ ,
ಒಂದಷ್ಟು ವಾದ ,
ಹೇಗೋ ನೀವಳಿಸಿ
ಬಿಸಾಡುವ
ಉತ್ತರಗಳ ಪಟ್ಟಿ ..,
ಅದ  ಸುಟ್ಟು , ಬೆಳಕು
ಹರಡುವ ,
ನೆರಳ ಸೃಷ್ಟಿಸಿ

ಮರೆಯಾಗುವ ..

ಮುಂದೆ
ನಿಮ್ಮ ಅಹ್ವನವಾದಗಲೆಲ್ಲ ,
ಹೊಗೆ ಉಸಿರಾಡುವ ,
ನಿಮ್ಮ ಕೈಗಂಟಿದ ಈ ಬೂದಿ
ಅನಂತವಾಗಲಿ ,
ಬಿಡಿಸಲು ಅನುವಾಗಲಿ
ಬದುಕ ಕಗ್ಗಂಟು ...












ಭಾನುವಾರ, ಡಿಸೆಂಬರ್ 14, 2014

ಮಂಗಳವಾರ, ಡಿಸೆಂಬರ್ 2, 2014

ಪೂರ್ತಿಯಾಗಲಿ

ಅರೆ ಬರೆ ಕಾವ್ಯ .., 
ಪೂರ್ತಿಯಾಗಲಿ   

ಇಳೆಯ ಪರಿಧಿ
ಮೀರಿ ,
ಅವನ ಸರದಿ
ಜಾರಿ ,
ಖಾತ್ರಿಯಾಗಲಿ , 

ಎಂದು ಜಾರದ 
ಕಣಿವೆ ,
ಎಂದು ನಿಲ್ಲದ 
ಹರಿವು .., 
ಕಾವ್ಯದೊಡಲ 
ತುಂಬಿ ಬರಲಿ ,

ಬದುಕಿ  ಬರಲಿ 
ಬದುಕು 
ನೀರಸತೆ ಮೀರಿ , 
ಉಕ್ಕಿ ಬರಲಿ 
ಕಾವ್ಯ 
ಜಡತನವ ತೂರಿ ., 

ಅರೆ ಬರೆ ಕಾವ್ಯ .., 
ಪೂರ್ತಿಯಗಲಿ  

ಇಳೆಯ ಪರಿಧಿ
ಮೀರಿ ,
ಅವನ ಸರದಿ
ಜಾರಿ ,
ಖಾತ್ರಿಯಾಗಲಿ , 

ಎಂದು ಜಾರದ 
ಕಣಿವೆ ,
ಎಂದು ನಿಲ್ಲದ 
ಹರಿವು .., 
ಕಾವ್ಯದೊಡಲ 
ತುಂಬಿ ಬರಲಿ ,

ಬದುಕಿ  ಬರಲಿ 
ಬದುಕು 
ನೀರಸತೆ ಮೀರಿ , 
ಉಕ್ಕಿ ಬರಲಿ 
ಕಾವ್ಯ 
ಜಡತನವ ತೂರಿ ., 

ಅರೆ ಬರೆ ಕಾವ್ಯ .., 
ಪೂರ್ತಿಯಗಲಿ