ಭಾನುವಾರ, ಡಿಸೆಂಬರ್ 16, 2012

ದೀಪ ದಿಟ್ಟಿಸಿ..!

ದೀಪ ದಿಟ್ಟಿಸಿ
 ಕಣ್ಣು ತೋಯ್ದಿವೆ
ಯಾವುದು ಆ ಧ್ಯಾನ
ದೈವ ಕಾಣದು , 
ಜೀವ ತಣಿಯದು 
ಯಾವುದಾ ಪರಮಾತ್ಮ ..

ದೀಪವಾರಿಸೆ 
ಕತ್ತಲಪ್ಪಲು 
ಎಷ್ಟು  ದ್ವಂದ್ವ,
ಅನಂತ ಭಾವದ
ಅತಿಕ್ರಮಣ ,
ನಾಳೆ ನಿನ್ನೆಯ ಒಗಟು 
ಬಿಡಿಸಲು  
ಮತಿಬ್ರಮಣ ..

ನಿನ್ನೆ ಕಳೆದಿದೆ 
ನಾಳೆ ಬಾರದೆ 
ಇಂದಿನೆಡೆಗೆ ಅಲಸ್ಯ..,
ಜೀವ ಬಯಸಿದೆ 
ಕಾಲ ನಿಲಿಸಲು 
ಎಂತದು ಈ ಮೌಡ್ಯ ..

ಹೇಗೆ ನಿಲಿಸಲ್ಲಿ 
ಕಣ್ಣ ಮುಚ್ಚದೇ 
ಹರಿದು ಮರೆಯುವ 
ನೆನಪನು ..

ನನಗು ಗೊತ್ತು ಕಾಲ 
ನಿಲ್ಲದು ..
ಇಂದು ,ಉರಿದು
ಅಳಿದು ,ಮುಗಿವುದು...
ಇಂದು  
ನಿನ್ನೆ ಆಗದಿರಲು 
ಬದುಕದಿರುವ ಶಪಥವು .

ನಾಳೆಯಾ  
ನಿನ್ನೆಯಲಿ 
ನೆನಪು ಖಾಲಿ ..
ಬಾರದು 
ಮತ್ತಾವ 
ಖಯಾಲಿ .

ದೀಪ ದಿಟ್ಟಿಸಿ ನಾಳೆ 
ಕೂರುವೆ 
ಕಾಣಲ 
ಪರಮಾತ್ಮವು..... 







ಬುಧವಾರ, ಡಿಸೆಂಬರ್ 12, 2012

ಕಾಯುವುದು ಎನ್ನ ದೆಶೆಯು !!

ಎಲ್ಲೋ ಇರುವ
ಮಳೆಯ
ಮೋಡ ಹೊತ್ತು 
ತಂದು
ಹೊತ್ತು ಮುಳುಗೋ 
ಹೊತ್ತಲ್ಲಿ 
ಎರಚಿ ಹೋಗಿ ..
ಬೆಳೆದು ನಿಂತ 
ಪೈರು 
ಬೇರು ಆಚೆ 
ಬಂದು 
ನಲುಗಿ ಜರುಗಿ... 

ಉಳಿದ  ಕೊನೆಯ 
ಮೊಳಕೆಯು 
ಮುದುಡಿ 
ಪಸಲಿಲ್ಲ ,ಅಸಲಿಲ್ಲ 

ಎಂತ ಮುನಿಸದು 
ಮೋಡ ,
ಯಾಕೆ 
ಸುರಿದು ನಿಂತೇ ?

ಎಂತ ಕಾವು
ರವಿಯೇ 
ಮೊಡವ
ಇಲ್ಲಿಯವರೆಗೂ
ಬಿಟ್ಟೆ ...

ಮೋಡದ
ಮರೆಯಲ್ಲಿ 
ಇಣುಕಿರುವ
ದೊರೆಯೇ ?

ಯಾಕಿಂತ 
ಮುನಿಸಾಯಿತು  ..
ಮತ್ತೆ  ತೊರೆ ತುಂಬಲಿ
ಎಂದರಸೊ 
ಪೂಜೆ ಬಾಗಿನಕು 
ಬರವಾಯಿತು ..  

ಇನ್ನು  ಕಾಯುವುದು ಮಾತ್ರ 
ಎನ್ನ  ದೆಶೆಯು , 
ಉಳಲು 
ನೇಗಿಲ ಕಟ್ಟಿ 
ಹೂಳಲು 
ಬಿಜವ ಹೆಕ್ಕಿ , 
ಕಾಯುವೆ
ಅದೇ ಮಳೆಗೆ
ವರುಷ ಸವೆಸು ... 









ಭಾನುವಾರ, ಡಿಸೆಂಬರ್ 9, 2012

ವಾಂಛೆ ...

ಇಳಿ ಸಂಜೆಯ ಹೊತ್ತು , ಪಾರ್ಕಿನ ಮೊಗಲಿನ ಆ ಸಣ್ಣ ಮನೆ,  ಒಂದು ರೂಂನಷ್ಟು ಅಗಲ ..
ಆ  ಮನೆಯ ಅಂಗಳದಿ ಅತ್ತಿಂದಿತ್ತ ಓಡಾಡುಡುವ ಆ ಹುಡುಗ , ಕೈಯಲ್ಲಿ ಪುಸ್ತಕ .. ಸೆಕೆಂಡ್   ಪಿ ಯು  ..ಕೆಮಿಸ್ಟ್ರಿಯದ್ದು
ಒಮ್ಮೆಗೆ ನೆನಪು ಹತ್ತು ವರುಷ ಜಾರಿತ್ತು ... 
ಕಾಲು ಮುರಿದು ವರುಷ ಹಾಳಗಿತ್ತು , ಇನೆನ್ನು ಹೊಸ ಬ್ಯಾಚ್ ನಲ್ಲಿ ಸೇರಿ ಇಂಜಿನಿಯರ್ ಹಾಗುವ ಕನಸು , ಆ ಕ್ಷಣದಲ್ಲಿ ನಡೆಯುತ್ತಿದ್ದ  ಸಿ ಇ ಟಿ ಪರೀಕ್ಷೆಯ ಗೊಂದಲ , ಹೆಚ್ಚಗಬಹುದಾದ ಫೀಸ್ ನೆನೆದು ನಮ್ಮ ಅಂತಸ್ತು ಅನುಮತಿಸುವುದಿಲ್ಲ ಎಂದು ವಿನಾಕಾರಣ ಅಳುತಿದದ್ದು . ಅಪ್ಪ ಅಮ್ಮನ ಮೇಲೆ ಎಂತದೋ ಕಿಚ್ಚು ,  ಬಡತನದ ಬೇಸರಿಕೆ ಅಸಹಯಕತೆಯದ್ದು , ಅದರ ವಿನ್ನ: ಮತ್ತಾವ ಸೆಳೆವು ಸಿರಿತನವ ಅಹ್ವನಿಸದು .. ಇಂದು ಅದ್ಯಾವ ನೆನಪು ಮಾಸಲೊಲ್ಲದು ..
ಬಡತನ ಕಳೆದು , ಹತ್ತು ವರುಷ ಕಳೆದು ,  ಮಧ್ಯದಲ್ಲಿ  ಹುಟ್ಟಿ ನಶಿಸಿ ಹೋದ ಆಕಾಂಕ್ಷೆಗಳ ಮೂಟೆ ಕಳೆದು,
ಕೂತು  ಬದುಕ ಅವಲೋಕಿಸಿದರೆ ಮತ್ತವೇ ಅಸಹಾಯಕತೆ , ಅಂದು ಬಡತನದ್ದು ಇಂದು ಖಾಲಿತನದ್ದು ...
ಕುರುಡಬಿಕ್ಷು ಬದುಕು,  ಮತ್ತೆ ಮತ್ತೆ  ನಾಹಿ ಎಂದವರ ಮುಂದೆ ನಿಂತು ಕೈ ಚಾಚುತ್ತದೆ , ಕರೆದು ಕೊಟ್ಟವರನ್ನು ನೆನಪಿಡದ ಸ್ಮ್ರತಿ ಅವರನ್ನೇ  ದೂಷಿಸಿ ಎಡುವುತ್ತದೆ. ..

ಎಲ್ಲ ಇರುವವರಿಲ್ಲ , 
ಇಲ್ಲಿ,
ಇರುವವರೆಲ್ಲ ,
ಉಳಿದು ಹೋದವರೇ ,
ಕಳೆದು ಹೋದವರೇ , 
ಯಾರೋ ಮರೆತು 
ಯಾರನ್ನೋ ನೆನೆದು ,
ನೆಂದು ಹೋದವರೇ .
.
ಮಾರಾಟವಾಗದೆ ಉಳಿದ ಸರಕು ..
ಅಂಗಡಿಯವನ ಮಾತಲ್ಲಿ 
ಗಿರಾಕಿಯೆದುರು  
ಮೆರಗುಗಳು ..
ಅವನಿಗೂ ಅರಿವಿದೆ 
ಇವು ಬೋರ್ಗರೆದು 
ಹರಿದು ಹೋದ ನದಿ 
ಕೊನೆಯಲಿ ಉಳಿಸಿದ 
ಪಾಚಿಯ 
ವಸಹಾತುಗಳು..

 ಮದ್ಯ ವಯಸಿನ ಆಯಾಮಗಳಲ್ಲಿ ಹೋರಾಟ ಆವರಿಸಿ ಬದುಕು ಪಯಣವಾಗಿ ಮತ್ತರಿಗೋ ಬದುಕುವ ಬ್ರಮೆ , ಯೌವನದ ಕಿಚ್ಚಲ್ಲಿ ಪ್ರೀತಿ ,ಸ್ನೇಹ , ಸಂಪತ್ತಿನ  ಮೋಹ ,  ಅನಿರ್ದಿಷ್ಟ ಬೆಳಕು ,... 

ನನ್ನದು ಇದಾವು ಅಲ್ಲದ ವಯೋಮಿತಿ , ಬದುಕಿಗೆ ಇಡುವ ಪ್ರತಿ ಗುರಿ ಜಯದ ಪ್ರತಿಬಿಂಬ ಎಂಬ ಯೌವನದ ಕನವುಗಳು ಸಣ್ಣಗೆ ಜಾರುತ್ತಿವೆ . 
ಬದುಕಿನೆಡೆಗೆ ವಿಮುಖನಾಗದ ಹೊರತು ಬದುಕಿನೆಡೆಗೆ ಆಕರ್ಷಣೆ ಬಾರದು .
 ಕೆಲಸದ ಆತ್ಮ ರತಿ ಇನ್ನು ಮುಂದೆ ವಿಜ್ರಮ್ಬಿಸಬೇಕಿದೆ , ಆ ಉತ್ಸಾಹ ಸುಳ್ಳೇ ಮೂಡಿಸುವ ದಾರಿಯಲ್ಲಿ ಸಂಸಾರದ ಬೆಳವಣಿಗೆ , ನನ್ನ ಮನೆಗೆ ಸ್ತಿಮಿತವಾಗುವ ಲೋಕ  ಕಲ್ಯಾಣ!!

ಎಂತದೋ ಸೆಳೆವಿದೆ ವಿಕ್ರತ ವಾನ್ಚೆಯಿದೆ , ಪ್ರಶ್ನೆಗಳೆಡೆಗೆ .. ಉತ್ತರದ ಪರ್ವದ ಹೊತ್ತಿಗೆ ಮುಪ್ಪು ಅವಾರಿಸದಿರಲಿ , ..
ಏಕಾಂತದ ಏಕತಾನತೆಗೆ ಮೈ , ಮನಸ್ಸು ಒಡ್ಡದ ಹೊರತು ಪ್ರಶ್ನೆಗಳು ಸಂಬವಿಸವು ...
ಇರಲಿ ಬಾಳು ಪಯಣದ ಹಬ್ಬ , ದಾರಿಯ ನಕ್ಷೆ ಬದಲಾಗುವುದು ನಿರೀಕ್ಷಿತ , ಒಮ್ಮೊಮ್ಮೆ ಬೆಳಕಿನಂತ ಬದುಕೆಡೆಗೆ ತಿರಸ್ಕರ , ನೀರಿನಂತಿದರೆ ಎಷ್ಟು ಚಂದವಿತು , ಇಂತದ್ದೆ ದಾರಿ ಇಂತದ್ದೆ ಹುಟ್ಟು , ಬೆಳಕಿಗೆ ಅಂತದಾವುದು ಇಲ್ಲ ,ಹುಟ್ಟುವುದ ಹೊರತು ಮತ್ತಾವುದರ ನಿಖರತೆ ಇಲ್ಲ .
ಬದುಕು ಬೆಳಕಿನಂತೆ ಕಾಲು ನಡೆಷ್ಟು ಕಾಲ ಸವೆಸಿ ಎಲ್ಲೋ ಮುಗಿದು ಹೋಗುವುದು .
ಬದುಕ ವಿಸ್ತಾರಗಳ ಆಳ ಅಗಲ ಅರಿವ ಹೊತ್ತಿಗೆ ವಿರಕ್ತಿಯ ಭಾವ .ಇಸ್ಕ್ಕನ್ ದೇವಸ್ಥಾನದ ಇಕ್ಕೆಲಗಳಲ್ಲಿ , ಪರಮಹಂಸರ ವಚನ ವೇದಗಳಲ್ಲಿ , ರಮಣರ ಮೌನದಲ್ಲಿ, ಹುಡುಕಾಡದ  ಜಾಗವಿಲ್ಲ , ನಿರ್ಲಿಪ್ತತೆ  ಎಂಬುದು ಸಾದಿಸಲಾಗದ ಮೌನಕ್ಕೆ ಅರಸಿ  ದಿನ ಕಳೆಯುತ್ತಿವೆ .
ಯಾವುದನ್ನೂ ಯೋಚಿಸದೆ ಹಾಗೆ ಸುಮ್ಮನೆ ಮನಸ್ಸಿಗೆ ಅವರಿಸಲೆಂದು ಕಾಯುವ ಮೌನವ ಅಧ್ಯಾತ್ಮ ?? ದೇವರ ಕುರಿತು ಎಷ್ಟು ಓದಿದರು ಪ್ರಶ್ನೆಗಳ ಹೊರತು ಮತ್ತೇನು ಮೂಡದು , ಉತ್ತರ ತಿಳಿದವರಿಲ್ಲ , ಹಾಗುವ ಎಲ್ಲ ವಿಸ್ಮಯ ,   ದುರಂತಗಲಿಗೆಲ್ಲ ಕರ್ಮದ ಹೆಸರಿಟ್ಟು ,  ಮುಗುಳ್ನಕ್ಕು ನಡೆಯುವ ಹಾದಿ ಎಲ್ಲಿಹುದೋ ಕಾಣೆ



ದೈವತ್ವದ ನಂಬುಗೆಯ ಹೊರತು ಮತ್ತವುದು ಹಿಡಿದಿಡಲಾಗದ ಚಂಚಲತೆ , ಯಾವ ದೈವವ ಎಲ್ಲಿ ಹುಡುಕಲಿ ಎಂಬ ದ್ವಂದ್ವ , ಇಷ್ಟಂತೂ ಸತ್ಯ , ದೈವ ಕಾಣುವವರ , ಭಾವಿಸುವವರ , ಮನಕ್ಕೆ ಬಿಟ್ಟ ವಿಚಾರ , ಎಲ್ಲರೊಳಗೂ , ಇರುವ ಎಲ್ಲರಲ್ಲೂ ಪ್ರವಹಿಸುವ ಅಂಶ . ಧರ್ಮ ,ಜಾತಿ , ಸಾಕಾರ ,ನಿರಾಕರ , ದ್ವೈತ .ಅದ್ವೈತ ಇವುಗಲೆಲ್ಲದರಲ್ಲೂ ಅರಳುವ ಸತ್ಯ, ತಿರಸ್ಕರಿಸಲು ಕಾರಣ ಇರದು , ಪರಾಮರ್ಶಿಸಲು ತಾಳ್ಮೆ ...
ಹೊತ್ತು ಮುಳುಗುವ ಮುಂಚೆ ಬೆಳಗಾಗಲಿ ಅದಾವ ಸತ್ಯವೋ , ವ್ಯರಾಗ್ಯದಿಂದಿಚಗಿನ ಪ್ರಪಂಚದಲಿ ಒಮ್ಮೆ ಅರಳಿ .....  
                                                                                                             




ಶುಕ್ರವಾರ, ಡಿಸೆಂಬರ್ 7, 2012

ನೀರಾಗ ಬಯಸುವೆ ..

 ಸೊಂಪು ಸೊಂಪು ಕಾಡು
ಇಂಪು  ಸಾಹಿತ್ಯ...
ತಂಪ ಸುರಿದು ,
ದಾರಿಯಲ್ಲಿ ದಣಿವಿಲ್ಲ,
ಸಾಗುತಿಹುದು ....

ದಿಶೆಯು  ಇರದ ಪಯಣ ,
ಎಂಥ ಸೌಖ್ಯವೋ ಕಾಣೆ ..
ಒಂದೇ ಸಮನೆ ಅತ್ತಿತ್ತ
ನುಸುಳುತಿಹುದು ..

ಸಾವಿರ ಕಣ್ಣು ನೋಡಲು
ನಾ  ಬೆಳಕು !! 
ಒಮ್ಮೊಮ್ಮೆ ಮಂಜಾಗಿ
ಕವಿಯುತಿಹುದು ...

ನೋಡೋ ಕಣ್ಣಿಗೆ ,ತಿಕ್ಷ  , ವೇಗ...
ಜ್ನಾನದಾಯಮ ನಾನು  ...
ರೆಪ್ಪೆಯನ್ಚಲಿ ಹೊಟ್ಟೆ ಕಿಚ್ಚು ..

ಬೆಳಕಿಗಷ್ಟೇ ಗೊತ್ತು ಹುಟ್ಟಿದು ..
ಹರಿಯುವ ದಾರಿ ಎಲಿಹದು ..?
ತೂರಿ ತೂರಿ ಜಗವ
ದಿಕ್ಕು ದೆಸೆಯಾ ಮೀರಿ 
ನಡೆಯುತಿಹುದು ..

ಒಮ್ಮೆ ಕಲ್ಲ  ಬಂಡೆ ..
ಒಮ್ಮೆ ಉಕ್ಕಿನ ಗೋಡೆ ...
ಒಮ್ಮೆ ತಿಳಿ ನೀರು ..
ಒಮ್ಮೆ ಗಾಜಿನ ಗೋಡೆ..
ನೀರು ಹರಿದಂತೆ ಹರಿಯುತಿಹುದು
ಅಲ್ಲಲ್ಲಿ ಕವಲೊಡೆದು ಸೋರುತಿಹುದು ...


ನೀರ ದಾರಿಗೆ ಅಂಕುಶ ,
ಕಟ್ಟಿ..
ಸ್ವಚಂದ ಹಾಸಿನ
ಹೊಳೆಯು ,
 ಕಾಲುವೆಯು..

ನಾ ಬೆಳಕು ತಿಕ್ಷ್ಣ ,
 ಅರಿತ,
ಸಂಜೆಯಾ  ಕಪ್ಪು
 ಆವರಿಸಲು
ಮುಗಿದು ಹೋಗುವೆ..

 ಸಾವಿರ ಕಣ್ಣುಗಳ
ಮಮಕಾರ ಹೊತ್ತು
ಹುದುಗಿ
ಹೋಗುವೆ ...


ಬೆಳಕ ಜನ್ಮ ಬೇಡ
ನೀರಾಗ
ಬಯಸುವೆ ..
ಅವಳಂತೆ ಹುಟ್ಟು ಸಾವಿನ
ನಿಕರತೆ ಅರಸುವೆ ...








ಬುಧವಾರ, ಡಿಸೆಂಬರ್ 5, 2012

ಎಲ್ಲಿಹುದೋ ಕಾಣೆ,

ಊರ  ದಾಟಿಸೋ ಸಾವು ,
ಸಾವ ದಾಟಿಸೋ ಊರು 
ಎಲ್ಲಿಹುದೋ ಕಾಣೆ, 

ಊರ  ಸೂತಕ  ,  ಶವದ ಗಂಧ  
ಉಸಿರು ,ಏದುಸಿರು... 
ದಾರೀ  ಸಾವೆಸಿ ಹೋಗಲೆತ್ತ ?
ಕೈ ಹಿಡಿದು ನಡೆಸೆನ್ನ 
ಎಲ್ಲ ನಿನ್ನ ಚಿತ್ತ ...

ಸಣ್ಣ ಕಂಪನವು ಇರದ ಕೇರಿ ನಮದು 
ಊರಿಗೆಲ್ಲ ಹಬ್ಬದ ಸೋಬಗು ಇತ್ತು ,
ಯಾವ ದೇವಿಯೋ ಅವಳು 
ಮನೆಗುಂಟ ಬಂದವಳು , 
ಸೇವೆಗೆ ನಿಂತೇ ,
ಹಾಲು , ನೀರು , ಸಕ್ಕರೆ, ಯಾಕೆ? 
ಜೀವವ ತೇಯ್ದು ನೆತ್ತರ ಸುರಿದೆ , 
ದೇವಿಯ ಕಣ್ಣಲಿ ಮೂಡಿದ ನಗುವು 
ಅರಳಿಸಿತೆನನ್ನು ನಾನು ಮಗುವು ..,

ಪೂಜೆಯ ಕೊನೆಯಲ್ಲಿ
ಮೈಮರೆತು ಮಾಡಿದ ತಪ್ಪೊಂದಿತು 
ದೇವಿಯ ಮುನಿವಿಗೆ ನೆಪವೊಂದಿತ್ತು 
ಮುನಿದವಳ ಮಡಿಲಿಗೆ ಸಿಲುಕಿ
ಊರು ನಲುಗಿ 
ಕರಗಿಹೋದವು ಊರು ,ಸುತ್ತ ಹೆಣವು ..

ನೆನ್ನೆಯೇ  ಮುದುಕ ,  ನಾಳೆಯ ಮಕ್ಕಳು 
ಎಲ್ಲ ಶೂನ್ಯ  ..
ನಿನ್ನೆ ಬದುಕು  ,ನಾಳೆಯ ತಳುಕು ,
ಎಲ್ಲ ಶೂನ್ಯ , ..
 
ಊರ  ದಾಟಿಸೋ ಸಾವು ,
ಸಾವ ದಾಟಿಸೋ ಊರು 
ಎಲ್ಲಿಹುದೋ ಕಾಣೆ, 





    
  

ಭಾನುವಾರ, ನವೆಂಬರ್ 18, 2012

ಕೋರಿಕೆ ...

ಎತ್ತ  ಹೋಗಲೋ ನಾನು
ಸುತ್ತಲು ಕವಿದವನೇ
ಇತ್ತ  ಬಾರದಿರು ಎಂಬ ಕೇರಿಯೆಡೆಗೆ  ...

ಸುತ್ತ ಹರಿದು ಹೋದ ಬೆಳಕು ಬೇಕು ಎನಗೆ
ಕೂಡಿಡಲು ಸಣ್ಣ ಕಂಚ ಕೊಡವು ,
ಸೊರದಿರೆ , ಅದರಲ್ಲಿ ಬಚ್ಚಿಟು ಬೆಳಕನ್ನು 
ಅಮಾವಾಸ್ಯ್ಗಗೆ ನಾನು ದಾರೆಯೆರೆವೆ ,,

ಕತ್ತಲೆಚ್ಚು ಇಲ್ಲಿ ಇದಾವ ಊರೋ ಕಾಣೆ
ಕಣ್ಣ ಬಿಟ್ಟು ನಿದ್ದೆ ಹೋಗಲರಿಯೇ !!



ಒರಗೆಯ ಹೂವು
ಕಂಪಸೂಸಿ ಸೆಳೆದು , ಮುಂಜಾವೆ ಮುದುಡಿ


ಮತ್ತೆ  ತಬ್ಬಿಬು ನಾನು ,
ನೀ ಅರಿಯದಾವುದಿದೆ ?!
ರವಿಯಾ  ಕಳಿಸು ಒಮ್ಮೆ ,
ಇಲ್ಲೇ ಮತ್ತೆ  ಹೇಗೋ ಅರಳಿ ನಿಲ್ಲುವೆ ...
ಇಲ್ಲವಾದರೆ ಈ  ಗಾಳಿಯಾ
ನಿಲ್ಲಿಸು ಸಾಕು 
ಅಳಿದ  ಕಂಪ ಎದೆಯೊಳಗೆ ಉಳಿಸಿ ,
ಹೊತ್ತಿ ಉರಿವೆ ...







ಮಂಗಳವಾರ, ನವೆಂಬರ್ 13, 2012

ಜಡ

ಅದಾವ  ಕರೆಯ ಸಿರಿಯೋ
ಅದಾವ ಸಿರಿಯಾ ಕೊರಗೋ
ಅದರಿಗಂತಲೋ ಮರುಗೋ !?
ವಿಷಾದ ವಿಷದ ಬೆರಗು ..

ಜರುಗಿ, ಇಂಚಗಲ ಸೊಬಗು ,
ಮತ್ತೆ ಮತ್ತೆ ಮಿನುಗೋ
ಇದೆಂತ ಕ್ರತಕ ಜಿನುಗೋ ??
ಒದ್ದೆ ಒದ್ದೆ ಬದುಕು ,

ಮುಟ್ಟಿದಂತೆ ಕೊನೆಯೂ ,
ಹೊಸತು ಒಂದು  ಶುರುವು ,
ಅದಾವ ಕವಲೊ ಕಾಣೆ
ಮುನಿದು ನಡೆದವು ,
ಅದಾವ ದಾರಿಯೋ ಕಾಣೆ
ನಡೆದು ಸವೆದವು  ,

ದಿಟ್ಟಿಸಿ ನೋಡಿದ ಪರಿಗೆ
ರೆಪ್ಪೆಗಳೇ ಜಡ,
ಮುಚ್ಚಲಾಗದೆ ಕತ್ತಲ ಅರಸಿದೆ...
ಎನ್ನ ಕಣ್ಣು ತುಂಬಿ
ಒದ್ದೆ ಒದ್ದೆ ನೆನಪು ,



 



ಮಂಗಳವಾರ, ಅಕ್ಟೋಬರ್ 2, 2012

ಮಿಕ್ಕದು ವಿಧಿ !!




ಹರಿದು ಹೋಗುವ ಮುನ್ನ ಕೊಂಚ ನಿಂತೇ 
ಧನ್ಯವಾದ ನೀರೆ ,
ನೀನುಳಿಸಿದ ಕೊನೆಯ ಹನಿ ಆವಿ :( 
ಮನಸ್ಸು ಮಳೆ ಕಾಣದ ಧರೆ!!  

ಕಾದದ್ದು ನೆನಪು 
ದಿನ,ವಾರ,ತಿಂಗಳು 
ವರಷಗಳಾದರೂ ಸರಿಯೇ !!

ನೀ  ಮುನಿದು ಹೋದ ಪರಿಗೆ 
ಕಾಯಲು ಈ ಜನ್ಮ 
 ಅವಶೇಷ ,ಇತಿಹಾಸ !!

ಅದಾವುದೋ ಸಾಗರಕ್ಕೆ ನೀ ಸೇರಿದ್ದು ಸುದ್ದಿ , 

ಅದೇ  ಸಾಗರಕ್ಕೆ ಸೇರಿಸುವ ,ಇಲ್ಲೊಂದು ನದಿ 
ಆಸ್ಥಿ ಯಾಗಿ ಅದ ಸೇರಿರುವೆ ,  ಮಿಕ್ಕದು ವಿಧಿ !!  

ಮಂಗಳವಾರ, ಸೆಪ್ಟೆಂಬರ್ 25, 2012

ಸೇರು ಬಾರೆ



ನಿನ್ನ ಕೆನ್ನೆಗೆ ಅಲೆಲ್ಲೋ ಗುಳಿ ಬಿದ್ದಾಗ
ಕೂತಲ್ಲೇ ನಾ ಇಲ್ಲೇ ಎಡವುತಿದ್ದೆ
ನಿನ್ನ ಸೊಂಪಾದ ಕೊದಲು
ಗಾಳಿಗೆ ಅದುರಲು
ಕೂತಲ್ಲೇ ನಾ ಇಲ್ಲೇ ಜಾರುತಿದ್ದೆ

ನೀನಿರದ ಬಾನಲ್ಲಿ ಮಳೆಯ ಅರಸಿ
ಬಿಸಿಲಿಗೆ ಕಣ್ಣಾಗಿ ಕಾಯುತಿದ್ದೆ
ಒಮ್ಮೊಮ್ಮೆ ನೆನಪು ಅತಿಯಾಗಿ ಕಾಡಲು
ನನ್ನ ಕಣ್ಣಿರಿಗೆ ಸಿಲುಕಿ ನಾ ತೊಯುತಿದ್ದೆ

ದೂರು ಇರುವುದು ಸರಿಯೇ, ಬಳಿಗೆ ಬರುವುದು ಸರಿಯೇ
ದ್ವಂದ್ವ ಬಿಟ್ಟು ನನ್ನೇ ಸೇರು ಬಾರೆ

ಅಷ್ಟು ಕನಸುಗಳ ಮಗುಲಲ್ಲಿ ಕೂತು ಒಂದೇ ಕ್ಷಣದಲ್ಲಿ ಹರಡಿ ಬಿಡುವೆ


ಬುಧವಾರ, ಆಗಸ್ಟ್ 22, 2012

ಸಾಗರಿ !!

ಹೋದ ದಾರಿಯೇ ಮರಳಿ ಬಾರದೆ ಕಳೆದು ಹೋಗು ,
ನೀರಿಗೆ ಬೇಲಿ ಬೇಕು ,ಕೆರೆಯಾದರು ಸರಿ,  
ಹರಿಯಲಾರೆ ಇನ್ನು ,ಆ ತೊರೆಗೆ ಅಂಟಿ ,
ನಿನ್ನ ಸಾಗರದ ಹೊರತು ಮತೆಲ್ಲು ಕೂಡಲಾರೆ !
ಇಂಗಿ  ಹೋಗುವೆ ,ಆವಿಯಗುವೆ
ಹರಿಯಲಾರೆ ... 

ಬಣ್ಣ ದ  ಭೇದವಿಲ್ಲ  , ಸ್ಪರ್ಶದ ಭೇದವಿಲ್ಲ  
 ಆಗಸನಿಗೂ ಮಂಕು ಹತ್ತಿದೆ ,ಎಂದಿನಂತೆ  ಆವರಿಸಿ ನಿಂತಿಹ ,ಕಣ್ಣಿಗಂತೂ ನೀಲಿ ನೀಲಿ ,

ಉಸಿರಗ0ಟಿದೆ  ವಾಸನೆ , ಹೋಗಲು ಒಲ್ಲದು !
ಅರಿಯಬಲ್ಲೆ ನೀನಿಲ್ಲವೆಂದು ನಿನ್ನದಲ್ಲದ ಅಲೆಗಳೆಂದು ,

ಹರಿಯಲಾರೆ ,ಹರಿದು ಸೇರಲಾರೆ ...
ಹಿಂಗಿ ಹೋಗುವೆ ,ಆವಿಯಗುವೆ
ಹರಿಯಲಾರೆ ... 





ಭಾನುವಾರ, ಮಾರ್ಚ್ 25, 2012

ಅಸಹಾಯಕ....

ಈ ಕಥೆಗೆ ಹತ್ತು ವರುಶ ಸುಮಾರು ವಯಸ್ಸು ... ಆತ ಕೂಲಿಯವನು, ಕಟ್ಟುಮಸ್ತಾದ ಕಪ್ಪು ದೇಹ ವಯಸ್ಸು ಮೂವತೈದರ ಹಾಸು ಪಾಸು. ಸುಮಾರು ಹನೊನ್ದು ,ಹೊತ್ತು, ಯಾರೊ ಹೆಗಲ ಮೇಲೆ ಎರಿಕೊ೦ಡು ಬ೦ದ , ಬ೦ದವನಿಗೆ ಈತ ನಿತ್ಯ ತನೊಟ್ಟಿಗೆ ಮೂಟೆ ಹೊರುವಾಗ ಕೈ ಚಾಚಿದಗ ಬೀಡಿ,ಬೆನ್ಕಿ ಪೊಟ್ಟನ ಕೊಡುವ ಪರಿಚಯಸ್ತ ಅಷ್ಟೇ .
ಬಡತನದ  ವೈಶಲ್ಯ ದೊಡ್ಡದು ನೀಡುವ ಭಾಗ್ಯ ಸಿಕ್ಕರೆ ಪೂರ ಧಾರಳ ಆತ ಒಬ್ಬನೆ ತನ್ನ ಸಹಕರ್ಮಿಯನ್ನ ಕರೆದು ಆಸ್ಪತ್ರೆಗೆ ಬನ್ದಿದ್ದ.. ಅಲ್ಲಿಗೆ ಅವನ ಕೆಲಸ ಮುಗಿದನ್ತೆ .
ಮುನ್ದೆ ಎಲ್ಲ ದುಡ್ಡಿನದು ವ್ಯವಹಾರ ,ಸಿಸ್ಟರ್ ಕರೆದು ಬೆಡ್ ಯವುದೂ ಎನ್ದು ಕೇಳಿ ಮಲಗಿಸಿ ಸಮಾಧಾದನ ಮಾತಾಡಿ ಹೊರಟು ನಿ೦ತ . ಮಲಗಿದಾತ ಸಣ್ಣ ದನಿಯಲ್ಲಿ ಅ೦ಗಲಾಚಿ ತನ್ನ ಹೆ೦ಡತಿಯ ಕರೆಸುವನ್ತೆ ಕೇಳಿಕೊ೦ಡ.
ಆಮೇಲೆ ಎಲ್ಲ ನಿಶಬ್ಧ,ನೀರವ...


ಬೆಳಗ್ಗೆ ಎ೦ದಿನಂತೆ  ಹಾಲು , ಬ್ರೆಡ್ಡು ವಾರ್ಡಿಗೆ ಬ೦ದಾಗ ಸೂರ್ಯೊದಯ .
ಇನ್ನು ನನಗೆ ರಾತ್ರಿಯದೆ ಯೋಚನೆ.  ನಡೆದದ್ದು ನಿಜವ ? ಅ ವ್ಯಕ್ತಿ ಅನ್ಗಲಾಚಿ ತನ್ನ ಹೆ೦ಡತಿಯ ಕೆಳಿಕೊನ್ಡದು ಸಣ್ಣಗೆ ನನೊಳಗೆ ಎನ್ತದೊ ನೋವ ಹರಿಸಿತ್ತು.

ಪಕ್ಕ ತಿರುಗಿದೆ ಅದೆ ವ್ಯಕ್ತಿ ! ಬೆಡ್ಡಿನ ತುದಿಗೆ ಅ೦ಟಿ ಒ೦ದು ಸಣ್ಣ ವಯಸ್ಸಿನ ಹೆ೦ಗಸು ನಿ೦ತಿತ್ತು.ಪಕ್ಕ ಸುಮಾರು ೫ ವರುಶ ವಯಸ್ಸಿನ ಹೆಣ್ಣು ಮಗು ...

ಡಾಕ್ಟರ್ ಬರುವುದ ಕಾಯುತ ಇದ ಅವರ ಕಣ್ಣಲಿದ ಭಯ ! ಆತನಿಗೆ ಯಾವ ನೊವು ಇಲ್ಲ...
ಡಾಕ್ತರ್ ಗೆ ಹೇಳುತ್ತಿದ " ಕಾಲಿನಿನ್ದ ಕೆಳಗೆ ಮರಗಟ್ಟಿದೆ ,ನೊವು ಅಗವಲ್ದು ಮೂಟೆ ಹೊರ್ವಾಗ ಸ್ವಲ್ಪ ಜಾರಿದ್ದು ನೆನಪು ಆಮೇಲೆ ಕಾಲೆ ಎಳಿಯಕಾಗ್ಲಿಲ್ಲ ಸಾರ್ " , ಡಾಕ್ಟರ್ ಜೊತೆ ಬ೦ದ ಇನ್ನೊಬ್ಬ ವೈದ್ಯನಿಗೆ ಹೇಳಿದರು   "ಸ್ಪೈನಲ್ ಕಾರ್ಡ್ ಹೊಗಿದೆ , ಏನು  ಮಾಡುವುದಕ್ಕೆ  ಬರಲ್ಲ", ನನ್ನ  ಕಣ್ಣು  ಮಂಜಾಯಿತು .

ಆತನ ಹೆ೦ಡತಿ ವೈದ್ಯರನ್ನೆ ದಿಟ್ಟಿಸಿ ನೊಡ್ತಿದ್ಲು, ಅವ್ರು ಆಕೆಯನ್ನ  ಗಮನಿಸಲೂ ಇಲ್ಲ , ರೂಮಿನ್ದ ಹೊರಗೆ ಹೊರಟ್ರು.

ಯಾರೊ ನೊಡುವುದಕ್ಕೆ  ಅನ್ತ ಬ೦ದ್ರು , ಮತ್ತೆ ಯಾರೋ  ದೊಸೆ ತನ್ದು ಕೊಟ್ರು ..
ಪರ್ಸೆಲ್ ತೆಗೆದು ಅವನ ಬಾಯಿ ತುತ್ತು ಇಡುತ ಅವಳು ಭೊರ್ಗರೆದಳು ಅವನು ಅವಳಿಗೆ ಸಮಾಧಾನದ ಮಾತ ಬಾಯ ತೆರೆಯದೆ ಕಣ್ಣಲ್ಲೆ ಹೇಳುತ್ತಿದ್ದ ,
ಅವನಿಗೆ ಅರಿವಾಗದೆ ಮೂತ್ರ ವಿಸರ್ಜನೆಯಾಗಲು ಆಕೆ ಬೆಡ್ ಪಾನ್ ಇಡಲು ಮುನ್ದಾದಳು, ಆತ ಆಕೆಗೆ ಕಾಣದನ್ತೆ ಅವಳಿಗೆ ವಿಮುಖನಾದ ,ಆತನ ಕಣ್ಣು ಭರ್ತಿ ..!!






ಬುಧವಾರ, ಜನವರಿ 25, 2012

ಹುಡಕಲಾ??

ಜಡ್ಡು ಬಿದ್ದ ದೇಹ, ಮೊನ್ಡು ಬಿದ್ದ ಮನಸ್ಸು..
ತಿಡ್ಡಿ ತೀಡಿದ ಕನಸಿಗನ್ತು ಮಾತು ಮಾತಿಗೂ ಮುನಿಸು ...
ಅರ್ಧ ದಾರಿ ನಡೆದಾಯ್ತು !!
ಚಪ್ಪಲಿಯ ಬದಲಿಸುವ ಸಮಯ??

ಕನ್ಡ ಕನಸಲ್ಲಿ ಅರ್ಧ ನೆನಪು,
ಇನರ್ಧ ಗಾಡ ನಿದ್ರೆಯ ಕನವರಿಕೆಯನ್ತೆ;

ಅದರೆಡೆಗೆ ಸಣ್ಣ ನಿರ್ಲಕ್ಷ್ಯ,ಹಾಗೆ ಮರೆವು...

ದಾರಿ ಉದ್ದಾ ಎನೊ ಕಲೆದುಕೊನ್ಡನ್ತೆ ಭಾವ ??
ಹುಡಕಲಾ??
ಬೆಡವೆನ್ದೆನ್ದಿದೆ ಮನ,
ಮತೆ ಹೊಸದಾಗಿ ಪಯಣವ ಆರ೦ಭಿಸುವ ಆಸೆ :-(

ಮಂಗಳವಾರ, ಜನವರಿ 24, 2012

ಸನ್ಕ್ಯಾಶಾಸ್ತ್ರ ಪ್ರವೀಣ ನಾನು ...

ಅಗಲಿಕೆಯ ಆಲಿನ್ಗನಕ್ಕೆ
ಉನ್ಮಾದದಲ್ಲು ವ್ಯರಾಗ್ಯ ...
ಸನ್ಕ್ಯಾಶಾಸ್ತ್ರ ಪ್ರವೀಣ ನಾನು
ಕಳೆದದ್ದೇ ಹೆಚ್ಚು ...
ಕೊಡಿಟ್ಟಿದರೆ??
ಪ್ರತಿ ಕ್ಷಣದ ಅಹ್ಲಾದ ಸೇರಿ ಅಸನ್ಖ್ಯ ಮುತ್ತು!!
ಮುಪ್ಪಿನಲು ಮೆಲುಕುವಶ್ಟು!

ಒಮ್ಮೆ ಕಮ್ಪಿಸು....

ನಿಶ್ಚಲ,ನಿರ್ವಿಕಾರ ಮನಸೆ
ಒಮ್ಮೆ ಕಮ್ಪಿಸು
ನಿನ್ನ ಸಾಕರದ ಅನುಭೂತಿಗೆ ನಾ
ಜೊಳಿಗೆ ಇಡಿದ ..
ಕಳವಳದ ಅನ್ಚಲಿ ನಾನು
ಇನ್ನು ನಾ ನಿರ್ಭಿತ ...
ನನ್ನ ಕೈ ಇಡಿದು ನಡೆಯಲು
ನಿನಗೆ ಈ ಕ್ಶಣ ಪ್ರಸ್ತುತ ..

ನಿನ್ನ ಕಮ್ಪನಕ್ಕೆ ನಾ ಆಸರೆಯಾಗುವೆ ...
ಕಣ್ಣ ಮುಚ್ಚಿ ಆ ಕೆಮ್ಪಲಿ ಕಳೆದು ಹೋಗುವ ..
ಒಮ್ಮೆ ಕಮ್ಪಿಸು....

ನಾ ಕಾಯುತಿರುವೆ.

ಪ್ರಘ್ನೆ ಕಳೆದೊಯ್ತು!

ಸನ್ಗಾತದ ಅನೂಭೂತಿಗೆ ಒಗ್ಗಿ ವರುಶ ಕಳೆಯಿತು ,
ಸಾನ್ಗತ್ಯದ ನಿಶೆ ಇಳಿಯಲು ಹರುಷ ಕಳೆದೊಯ್ತು ....
ಸೌಹರ್ದದ ಸಾವಿಗೆ ಹಪಹಪಿಸಿತು ಮನ ......
ಮನದ ಅರಿವಿಗೆ ಬರುವ ಮುನ್ನ ನರಕ ದರ್ಶನ !!
ಸೌಗನ್ದದ ಪುಶ್ಪ ಶವ ಅಲನ್ಕರಿಸಲು
ದಿಕ್ಕರಿಸಿ ನಿನ್ತಿದೆ ಮನ ,ಪ್ರಘ್ನೆ ಕಳೆದೊಯ್ತು

ನೆನಪಾಗದಿರು!!

ನೀನಾಡಿದ್ದ ಅಷ್ಟು ಮಾತು ಈ ಕ್ಷಣದಲ್ಲಿ ಮೌನಕ್ಕೆ ಸ್ಪೂರ್ತಿ,
ಆಘಾತವಾಗುವ ನೆನಪು ಮರೆವಿಗು ಮೀರಿದು !!
ನೆನಪಾಗದಿರು, ಸುಟ್ಟ ಅಷ್ಟು ಕನಸುಗಳು ಕಾಲಿಗೆ ಅಂಟಿದೆ ಬೂದಿಯಾಗಿ ..
ಮಳೆ ಇಲ್ಲ ಇಲ್ಲಿ .. ನಾ ನಡೆದಲ್ಲೆಲ್ಲ ನಿನ್ನ ಹೆಜ್ಜೆಗುರುತು..!
ನದಿಯ ಹರಿವಿಗೆ ಕಾಲ್ಚಾಚಲು ಭಯ ..
ಅಲ್ಲೇ ಕೂತು ಸಂಪ್ರೀತಿಗೆ ಒದ್ದೆ ಆದ ಶೀತಲದ್ದು
ಮತ್ತದೇ ನೆನಪು ನಿನ್ನ ಪಡೆದ ಅಹಮ್ಮಿನ ಶೈಥಿಲ್ಯದ್ದು
ನೆನಪಾಗದಿರು!!

ಹಳೆಯದೆ ಚಾಳಿ !!

ಕಲ್ಪನೆಯೆ ಚನ್ದವಿತ್ತು!!
ಕನ್ನಡಿಯನ್ತೆ, ನಕ್ಕಾಗ ನಕ್ಕು ,ಅತ್ತಾಗ ಅತ್ತು
ಮುದ್ದಾಡಿದನ್ತೆಲ್ಲ ನನ್ನನ್ತೆ ಅರಳುತ್ತ ,ಪ್ರತಿಬಿಮ್ಬ... :)
ಆಸೆಗೆ ಬಿದ್ದೆ,
ಅಳುವಿನಾಚೆಯ ಆಸರೆಗೆ ನಗುವ ಧಾರೆಯೆರುವ ಹುಚ್ಚಿಗೆ
ಅತಿರೇಕ ಮುಗಿವಷ್ಟರಲ್ಲಿ ಕನ್ನಡಿಯು ಇಲ್ಲ..
ಆಯ್ದು ಜೋಡಿಸುವ ಕುತೂಹಲಕ್ಕೂ ತೆರೆ,
ಮತ್ತೆ ಉಳಿದದ್ದು ಅದೆ...
ನೀ ಮುಗ್ದೆ ಎಮ್ಬ ಸುಳ್ಳು
ನಾ ಮರುಳದದ್ದಕ್ಕೆ ಸನ್ತಾಪ..

ಹಳೆಯದೆ ಚಾಳಿ !!
ನಾಳೆಯ ಅನನ್ತತೆಯೆಡೆಗೆ ದಿಟ್ಟಿಸುತ್ತ
ಸ್ವಗತಿಸುವುದು, ಸ್ವಾಗತಿಸಲು ಮತ್ತಾವುದೋ ಕನಸು ಕಾದಿರುವುದೆನ್ದು ;)

ನನ್ನ ಬಿಟ್ಟು ನಾ!!

ವಸ್ತುವಿಗೆ ತೂಕ ,ವ್ಯಕ್ತಿಗೆ ??
ಮುಳುಗಡೆಯ ಭಾಗ್ಯ ನಿಷ್ಟುರ :(
ತಾರತಮ್ಯ ಇಲ್ಲ...
ತೂಕದೊಟ್ಟಿಗೆ ಕಳೆದೊದೆಲ್ಲವ ಕಲೆಯಕಾಲು ತಳಾ ಬೇಕು
ಅನನ್ತತೆಯ ಪ್ರಾಪತ ಅದು, ಅಳತೆಗೆ ನಿಲುಕದ್ದು
ಅಳಾದ ಹರಿವಾಗದೆ ಕ್ಯೆ ಚೆಲ್ಲಲು
ಕತ್ತಲು ,ನೀರಲ್ಲು ನನ್ನಲ್ಲು!!
ಮುಳುಗಿದ ವ್ಯಕ್ತಿಗೆ ಚರ್ಮಗೀತೆಯ ಭಾಗ್ಯ ಇಲ್ಲ ,
ನೆನಪಿನನ್ಗಳದಲ್ಲಿ ಸ್ಮಾಶನ ಸ್ರುಷ್ಟಿಸಿದೆ ಮೌನ
ಸುಟ್ಟಾಯ್ತು ಉಳಿದ ಬೂದಿಯ ನೀರಿಗೆ ತೆಲಿ ಬಿಡಲು ಭಯ ಸುರ್ಯನದು,
ಆವಿಯಾಗಿಸಿ ಮಳೆಯಾಗಿ ನನ್ನ ನೆತಿಯ ತಾಕುವುದೆನ್ದು..
ನನ್ನೊಳಗೆ ಹೂತಿಟ್ಟು ನನ್ನ ಬಿಟ್ಟು ನಾನೆ ನಡೆದಿರುವೆ
ಅವಳಿಲ್ಲದ ಅಲ್ಲಿಗೆ ,ಅನನ್ತಕ್ಕೆ!!

ಬೆರಗು !!

ಕತ್ತಲೆಯ ಹೊಸತನಕ್ಕೆ ಬೆರಗು
ಕರಗಿದ ಬೆಳಕಿಗೆ ಬಿಳ್ಕೊಡುಗೆ
ಇದು ಹೊಸ ರೀತಿ,
ಕಮ್ಬನಿಗು ನನಗೂ ಮಾತಿಲ್ಲ ಇನ್ನು,
ಮೌನವೆ ದಡ, ಮೌನವೆ ನಿಟ್ಟುಸಿರು
ಮೌನದ ಅಲೆಗೆ ಮೈಒಡ್ಡಿ ಮಾತ ಮರೆವ ಸನ್ಕಲ್ಪ,
ಹೊಸತು ಇದು,ನವ್ಯ!
ಮಳೆಯೊ ಬಿಸಿಲೊ ,ಇನ್ನು ಹೊಸದೆ ಬದುಕು,
ಕೈ ಚಾಚಲಾರೆ !
ಪುರಾತನದ ಪುನರುತ್ಥಾನ ಸಾಕಗಿದೆ ,
ಉದುರಿ ಹೋದ ಎಲೆಗಳೆಲ್ಲ ಒಣಗಿವೆ, ಗಾಳಿ ಜೋರು
ಮರುಕವಿದೆ ಮರವಾಗಿ ,ವ್ಯರ್ಥದ್ದು!!
ಮಳೆಯಾಗಲಿ ,ಹೊಸ ಚಿಗುರು ಮೂಡಲಿ
ನೀರುಣಿಸಿದ ಧರೆಗೆ ಇನ್ನು ಅದೆಷ್ಟು ತರೆಗೆಲೆಯ ಕರವಿಹುದೊ ,
ಹೊಸತನಕ್ಕೆ ಬೆರಗು !!

ಸುಡಬಾರದಿತ್ತು!!!

ಬೆನ್ಕಿ!
ನಿನ್ನ ಕಣ್ಣ ತಮ್ಪಲಿ ಮಿನ್ದವಗೆ ಅಜೀರ್ಣ;
ಸುಡಬಾರದಿತ್ತು:(
ಹೂತಿದ್ದರೆ ಪ್ರಯಾಷ: ಶಿಥಿಲವಾಗುತಿದ್ದೆ, ಸಮ್ಯಮವಾಗಿ!
ಆತುರವಿತ್ತು ಕರಗಿಹೋಗಲು ನಿಜ,
ಮನ್ಜು ನಾನು ನೀರಗ ಬಯಸಿದ್ದೆ ,
ನಿನ್ನ ದ್ವೇಷದ ಉರಿಗೆ ನಲುಗಿ ಆವಿಯದೆ ,ಮೊಡವಾದೆ,
ಸುರ್ಯನಿಗೆ ನಿಕಟ ಈಗ:(
ಕಾವು, ಭಾರವಾಗಲು ಕಾದಿರುವೆ,
ಮಳೆಯಾಗಿ ಜಿನುಗಲು,ಜಲಪಾತವಾಗಿ ಭ್ಹೊರ್ಗರೆಯಲು

ಸುಡಬಾರದಿತ್ತು!!!

ಒನ್ದು ತೊರೆ ಅಷ್ಟೆ!

ಬ೦ಧನದ ಭೀತಿಯ ಇದದ್ದು?
ಸ್ವೆಚ್ಚೆಯ ಆಶೆಯ?
ಬ೦ದಿಯಾಗುವ ತ್ರಶೆ ಇತ್ತು ನಿಜ;
ಕೊಡಿಟ್ಟು ಕೊಳ್ಳುವ ವಿಪರೀತವಲ್ಲ,
ನನೊಳಗಿನ ನಿನ್ನ ಹುಡುಕಿದ ಪರಿಗೆ
ನಿನ್ನೊಳಗಿನ ನಾ ಅಸ್ಪರ್ಶ,ಅದ್ರಶ್ಯ!!
ಕವನವಾಗುವ ಬಯಕೆ ನಿನಗಿತ್ತಾ ?
ಹೇಳಿದ್ದರೆ ಸ೦ಕಲನವಾಗುತಿದ್ದೆ!
ಮಾತೆ ಮರೆತು ನಡೆದು ಹೋದೆ,
ಮೌನ ನನ್ನ ಪಾಲಿಗೆ ಉಳಿಸಿ ಹೋದ ಹೊದಿಕೆಯಾ??
ಹೊರಗಿನ ಚಳಿಗೆ ಮ್ಯ್ ಚೆಲ್ಲಲು ಆತ೦ಕವೆನ್ದು ನಾ ಹೆಳಲೇ ಇಲ್ಲ:(
ಒಳಗೆ ಸುಡು ಬಿಸಿಲು,ದಾವು
ಚೇತನ ಬಸವಳಿದಿದೆ, ಬೆಚ್ಚಿದೆ!
ಭ್ರಮೆಯ ಪರಿಧಿಗೆ ,ಇರುವ ಅರಿವಿಗೆ,
ಮೀರಿದ ಒಲವು ನಾನು
ಅಪ್ಪಿಕೊಳಲು ನಿನ್ನ ಬಹುಗಲಿಗೆ ಸ್ಥೈರ್ಯದ ಭಯ,
ಅತ್ಮಾನುಭುತಿಗೆ ಕಾಯುತ್ತಿರುವೆ, ನನ್ನ ಕಲ್ಪನೆಗೆ ನೀನು ಒನ್ದು ತೊರೆ ಅಷ್ಟೆ!
ಸಮುದ್ರದ ತೀವ್ರತೆ ನಾನು, ಮತಾವುದೊ ನದಿಯನ್ಚಿಗೆ ಅಸರೆಯಾಗುವೆ,ಭೊರ್ಗರೆಯುವೆ!!