ಶುಕ್ರವಾರ, ಜುಲೈ 11, 2014

ಪ್ರಯತ್ನ

ಒಂದು ನೀಳ ಬಿಡುವಿನ ನಂತರ ಮತ್ತೆ ಬರೆಯುವ ಹವ್ಯಾಸಕ್ಕೆ ಜೀವ !!
ಜೀವ,  ಜೀವನ ಪ್ರೀತಿ ಎರಡು ಕೂಡ ಕಣ್ಣ ಮಿಟುಕಿನಂತೆ ಬಂದು ಹೋಗುವ  ಮಾನಸಿಕ ಸ್ಥಿತಿ , ಒಮ್ಮೆ ಬರವಣಿಗೆ ಮನಸಿಗೆ ಮುದ ನೀಡುವ ಪರಿಯ ಅನುಭವ , ಅದರ ಮೆಲುಕು , ಆತ್ಮ ಸಾರ್ಥಕ್ಯದ ತುದಿ ತಲುಪಿಸಿದರೆ ಕೆಲವೊಮ್ಮೆ ಇರದ ಪಾತಾಳಕ್ಕೆ ನಿಂತಲ್ಲೇ ಅದುಮಿ ಛೇದಿಸುತ್ತದೆ  , ಆದರು ಬರೆಯುವುದರಲ್ಲಿ ಅಲೌಕಿಕ ಆನಂದವಿದೆ , ಜೀವದ  ಒಳಗೆ ಕೂತ ದೈವ ಹೊಂಕರಿಸಿ ವಿಜ್ರಮ್ಬಿಸುತ್ತಾನೆ .
ಮನುಜ ಕುಲಕ್ಕೆ ಇರುವ ಅಮರನಾಗುವ  , ಅನಂತನಾಗುವ ತ್ರಷೆಗೆ ಸಾಹಿತ್ಯ,  ಕಲೆ ಇವು ಸುಲಭಕ್ಕೆ ಸಿಗುವ ಮಾರ್ಗಗಳು  . ಇರಲಿ ನಮ್ಮದು  ಒಂದು ಪ್ರಯತ್ನಕ್ಕೆ ಸ್ವಾರ್ಥದ ನಂಟು ಅಂಟಿಬಿಡಲಿ !!!

         
       
ಮೂಲೆಯಲ್ಲಿ ಕೂತು ಸದಾ ಕೂಡ ಕಣ್ಣ ಮುಚ್ಚಿ ಇರದ , ಬಾರದ ದೈವಕ್ಕೆ ಅಭಿನಂದನೆಅರ್ಪಿಸಿ ರಾತ್ರಿ ಮಲಗುತ್ತಿದೆ  , ದೈವ ಹೊರತು ಮತ್ತೆಲ್ಲ ಪಾತ್ರಗಳು  , ಇದ್ದವರು , ಇರುವವುರು ಎಲ್ಲರು . 
ಇರದವರು ಮತ್ತೆ ಬಂದಂತೆ ,  ಇರುವವರು ದೂರವಾದಂತೆ ಕನಸುಗಳು . ದಿನ ಮುಂಜಾನೆ ಕನಸುಗಳ ಮೆಲಕು ಹಾಕಿ ದುಃಖದಲಿ ನೀರಾಗುತ್ತಿದೆ , ಒಮ್ಮೆ ಮಾತ್ರ ಕನಸಲ್ಲಿ ಕಂಡ ಸಂಪೂರ್ಣ ಚಿತ್ರ ಎದೆಯಲ್ಲಿ ಹಾಗೆ ಉಳಿಯಿತು ಎಲ್ಲ ಪಾತ್ರಗಳು ಯಾವುದೋ  ಜೈಲನಲ್ಲಿ ಬಂಧಿಯದಂತೆ  ,ನಾನು ಆ ಸೆರೆಮನೆಯ ಬಾಗಿಲ ಹೊರಗೆ ನಿಂತು ಅವರೊಡನೆ ಸದಾ ಬೇಡುವ ಪರಿ ,ಆ ಪಾತ್ರಗಳು ಬಂಧ ಮುಕ್ತಿಯಗಿಸುವಂತೆ ಕಾಡುವ ಪರಿ ... ಆ ದಿನ ಕನಸ ,  ಭಾವಗಳಲ್ಲಿ ಸೆರೆಮನೆಯ ಬಾಗಿಲ ತೆರೆದು   ನೀಳವಾಗಿ ಅಭ್ಯಸಿಸಿದೆ  .., ಈ  ನಡುವೆ ಕನಸು ಖಾಲಿ ಖಾಲಿ !
ಮೂಲೆಯಲ್ಲಿ  ಕೂತು ದೈವ  ಅಭ್ಯಸಿಸುತ್ತೇನೆ  ಕತ್ತಲ ಹೊರತು ಮತ್ತೇನು ನೆನಪಿರದು ಮುಂಜಾವಿಗೆ, ಅಳುವಿಲ್ಲ ಸರಿ , ಆಸೆಯು ಕೂಡ :(