ಸೋಮವಾರ, ಏಪ್ರಿಲ್ 20, 2020

Corona...

ಸುಮಾರು ವರ್ಷದ ನಂತರ account activate ಮಾಡಿದ್ದೇನೆ ... ಬರವಣಿಗೆ ಕೂಡ .
ನಂಜನಗೂಡಿಗೆ ಮಾರ್ಚ್ ೧೧ ರಂದು ಬೆಂಗಳೂರಿನಿಂದ ಬಂದೆ , ಲೊಕ್ಡೌನ್ ನಮಗೆಲ್ಲ ಒಂದಿಷ್ಟು  ದಿನ ಮುಂದಾಗೇ ಶುರುವಾಯಿತು , Corona ದ ತೀವ್ರತೆಯ  ಬಗ್ಗೆ ಆಗಲೇ ಒಂದಿಷ್ಟು ಭಯ ,ಆತಂಕ ,ಎಲ್ಲ ಇದ್ದಿದರ ಕಾರಣ ಅಪ್ಪ ಅಮ್ಮನ ಒಟ್ಟಿಗೆ ಇರಲು ಊರು ಸೇರಿದಾಗ ಸಮಾಧಾನ .
ನಮ್ಮೂರು , ನಮ್ಮ ಮನೆ , ಎಲ್ಲ ಆಪ್ತ ,ಆತ್ಮೀಯ , ನನ್ನೂರಿನ ರಸ್ತೆ , ಬೀದಿ , ದೇವಸ್ಥಾನ ,ನದಿ ತೀರದ ಮೆಟ್ಟಿಲು;ಕೆಲವೊಮ್ಮೆ ಎಲ್ಲ ಹುಡುಕಾಟ ,ಹೋರಾಟಕ್ಕೂ  , ಇಲ್ಲೇ ಅಂತ್ಯದ  ನಿಟ್ಟುಸಿರು , ಎಲ್ಲ ಮೀರಿದ ಸಾಂತ್ವನ .
ಇಡೀ ಭಾರತದದ ಉದ್ದಗಲಕ್ಕೂ ತಿರುಗಿದರು ನನ್ನೂರಿನ ಮತ್ತು ನನ್ನಬಾಂಧವ್ಯಕ್ಕೆ  ಸಮನಾದ ಭಾವ ಎಲ್ಲೂ  ಇಲ್ಲ  .
ಬೇರೆ ದೇಶಕ್ಕೆ ಶಾಶ್ವತವಾಗಿ ಹೋಗುವ ಅವಾಕಾಶ ಬಂದಾಗ ಕೂಡ  ನನ್ನೂರಿಗೆ ಬೇಕೆಂದಾಗ ನಾನು ಬರಲಾರದೆ ಹೋಗಬಹುದು ಎಂಬ ಪರಿಕಲ್ಪನೆಗೆ ಉತ್ತರಿಸಲಾರದೆ, ವೃತ್ತಿ ಬದುಕಿನ ಒಂದು ಪ್ರಮುಖ ನಿರ್ಧಾರ ಮಾಡಿದೆ, ನನಗೆ ನನ್ನ ಕಡೆ ಉಸಿರಿರುವವರೆಗೂ ಈ ವಿಚಾರವಾಗಿ ಕಿಂಚಿತ್ತೂ ಬೇಸರವಾಗಲಾರದು .
ಎಲ್ಲರಿಗು ತಮ್ಮ ತಮ್ಮ ಊರಿನ ಬಗ್ಗೆ ಪ್ರೀತಿ ಸಾಮಾನ್ಯ , ನನ್ನದು ಹಾಗೆ , ನನ್ನೂರು ತಾಯಿಯಂತೆ.

ನಂಜನಗೂಡು ಮೈಸೂರಿನ ಬೆಂಗಳೂರಿನ ಹಾಗೆ , ನಂಜುಡೇಶ್ವನ ದಿವ್ಯ ಕ್ಷೇತ್ರ , ಕಬಿನಿಯ ದೆಸಿಯಿಂದ ಕಾರ್ಖಾನೆಗಳ ತವರು , ದೇಶದ ಎಲ್ಲ ಭಾಗದ ಜನ ಇಲ್ಲಿ ನಿಮಗೆ ಕಾಣ ಸಿಗುತ್ತಾರೆ , ರಾಜ್ಯದ ಎಲ್ಲ ಭಾಗದ ಜನ ದೈವ ದರ್ಶನಕ್ಕೆ ವರ್ಷಪೂರ್ತಿ ಬರುತ್ತಾರೆ . ಈ ಊರು ಎಲ್ಲರನ್ನು ಅಪ್ಪಿಕೊಂಡು ಅವರಿಗೆ ಬದುಕು ಕಟ್ಟಿಕೊಳ್ಳಲು ಆಸರೆಯಾಗಿದೆ , ಮಾನವನ ಕೈ ಮೀರಿದ ಸಂಘರ್ಷಕ್ಕೆ ನಂಜುಡ , ಅವನ ದರ್ಶನಕ್ಕೆ ಇಂಡು , ಇಂಡು, ಭಕ್ತರು  . ಈಗೆ Cosmopoliton ಸಂಸ್ಕೃತಿ ನಮ್ಮದು  .

ಈಗ ವಿಷಯಕ್ಕೆ ಬರೋಣ ,  ಮೊದಲ ದಿನ Coronaದ ಕೇಸ್ ನಮೂರಲ್ಲಿ ವರದಿಯಾದಾಗ ಸುದ್ದಿ ಜೀರ್ಣಿಸಿಕೊಳ್ಳಲು ಕಷ್ಟವಾಯಿತು , ಸುದ್ದಿ ಬಿತ್ತಿಸಿದ channel ಗಳು , ನಿರೂಪಕರು , ಅವರ ನಾಟಕೀಯ , ಬೀಭತ್ಸ ರೀತಿಯ ಬಣ್ಣನೆ , ಅಲ್ಲಿಗೆ ಒಂದು ಊರಿಗೆ ,  ಆ ಊರಿನ ಜನಕ್ಕೆ ಶಾಶ್ವತ ಎನ್ನುವಷ್ಟು ಅಸ್ಪರ್ಶ್ಯ ಭಾವಕ್ಕೆ ನಾಂದಿಯಾಯಿತು ,
ಬೆಳಗೆ , ಸಂಜೆ , ಮಧ್ಯಾಹ್ನ ನಮೂರಿನದೇ ಸುದ್ದಿ , ಎಂದು ಕಾಲ್ ಮಾಡದ ಹಳೆಯ ಸ್ನೇಹಿತರು , ಪರಿಚಿತರು ಫೋನ್ ಮಾಡಿ , ಕಳವಳ ವ್ಯಕ್ತಪಡಿಸಿದ್ದು ಶುರು ಅಷ್ಟೇ , ನಂಜನಗೂಡಿನ ನಂಜು , corono ಫ್ಯಾಕ್ಟರಿ , ಉಪಮಾನ , ಉಪಮೇಯ , ಒಬ್ಬರಿಗಿಂತ ಒಬ್ಬರ ಕ್ರಿಯಾಶೀಲತೆ.
ಮನೆಯಲ್ಲಿ ಕೂತು ಟಿವಿ ನೋಡುವ ಅಪ್ಪ ,ಅಮ್ಮ ನಿಂದ ಇಡಿದು ಕಾಳಜಿಯಿರುವ ಪ್ರತಿಯೊಬ್ಬರಲ್ಲೂ ಮೂಡಿಸಿರುವ ಕಳವಳ ,ಆತಂಕ ನಾನು ಇಲ್ಲಿ ಹೇಳಿದಷ್ಟು ಕಮ್ಮಿ .
ಅದರ  ಮೇಲೆ  ಕಿವಿಗೆ ಬೀಳುವ ಸುದ್ದಿ , ನಮ್ಮೊರಿನ ಪಕ್ಕದ ಹಳ್ಳಿಗಳ ಜನ ನಮೂರಿನ ಜನ ರಸ್ತೆಯ ಮೇಲೆ ಹಾದು ಹೋಗಬಹುದೆಂದು ದೊಡ್ಡ ಹಳ್ಳ ತೆಗೆದು , ರಸ್ತೆಗೆ ಮರದೆತ್ತರ ಮಣ್ಣು ಸುರಿದು , ನಮ್ಮನು ಪ್ರತ್ಯೇಕಿಸಿದ್ದಾರೆ ಎಂದು ಯಾರೋ ಹೇಳಿದಾಗ , ಸರಿ ಎನಿಸಿದರೂ , ನಮೂರಿನ ಆ ಕಾರ್ಖಾನೆಯಾ ನೌಕರರು ಬರಿನಮ್ಮೂರಿಗೆ  ಸೀಮಿತರಿರಲಿಲ್ಲವೆಂದು ಗೊತ್ತಿದಕಾರಣಕ್ಕೋ  ಏನೋ ಸಣ್ಣ ಬೇಸರ ಮೂಡುತ್ತಿತ್ತು .

ನಮಗೀಗ ಎಲ್ಲ ಬಹಿಷ್ಕಾರ ಹಾಕಿದ್ದಾರೆ , ಮಾರ್ಚ್ ೨೮ ರಂದು , ಸ್ವಂತ ಚಿಕ್ಕಪನ ಅಂತ್ಯ ಕ್ರಿಯೆಗೆ ಹೋಗಲು ಆಗಲಿಲ್ಲ ನಾವು ನಂಜನಗೂಡಿನವರೆಂದ  ಕಾರಣಕ್ಕೆ ನೀವು ದಯವಿಟ್ಟು ಬರಬೇಡಿ ಎಂದು ಊರಿನವರು ಹೇಳಿದಾಗ ಆದ ಸಂಕಟ , ನನ್ನಪ್ಪನ ಕಣ್ಣಲಿ ಇಂದಿಗೂ ಕಾಣುತ್ತಿರುವ ಆ ನೋವು , ಇದ್ಯಾವುದು ನನಗೆ ಮಾತ್ರ ವಿಶೇಷವಾಗಿ ಸಂಭವಿಸಿದೆ ಎಂದು ನಾನು ಅರ್ಥೈಸುತ್ತಿಲ್ಲ  ,ನನ್ನಂತೆ ನೂರಾರು ಜನ ಇದಕ್ಕಿಂತ ಹೆಚ್ಚಿನ ಸಂದಿಗ್ದತೆಯಲ್ಲಿ ಸಿಲುಕಿದ್ದಾರೆ  ,ಆದರೆ ಒಂದು ಊರಿಗೆ , ಆ ಜನರಿಗೆ ಈ ಪರಿಯ ಬಹಿಷ್ಕಾರ ಹಾಗು ತಿರಸ್ಕಾರ ಮೂಡಿಸುವಂತೆ ಚಿತ್ರಿಸಿರುವ ಮಾಧ್ಯಮಗಳು , ಇಲ್ಲಿನ ಜನ , ಅವರ ಮನಸಿನ್ನ ತಲ್ಲಣ , ಅವರ ಮೇಲೇ  ಮೂಡಿಸಿರುವ ಸಂಶಯ , ಅದನ್ನು  ಅಳಿಸಲುಬೇಕಾಗಬಹುದಾದ  ಹಲವು ತಿಂಗಳು  , ವರುಷಗಳು , ಅವುಗಳ ಬಗ್ಗೆ ಸ್ವಲ್ಪ ಚಿಂತನೆ ಮಾಡಿದರೆ ಸಂವೇದನೆ ಎಂಬ ಪದಕ್ಕೆ ಅರ್ಥ ಬರುತ್ತದೆ .

ನಮ್ಮೊರಿನ  ಜನ , ಈ ದಿನಗಳು ಮುಗಿದ ಮೇಲು ಊರ ಹೆಸರು'ಹೇಳಲು ಮೂರು ಬಾರಿ ಯೋಚಿಸುವಂತ ಸ್ಥಿತಿಯಿದೆ . ನಮೂರಿಗೆ Corona ಬಂದದ್ದು ಕಾಕತಾಳೀಯ , ರೋಗ ಇಲ್ಲಿಂದ ಹೋಗಿ ನಾನವು ಮುಕ್ತರಾಗುವದುನಿಶ್ಚಿತ  , ರೋಗದ ವಿರುದ್ಧ ಹೊರಡುವುದು ನಮ್ಮೆಲರ ಹೊಣೆ, ಹೋರಾಡುವ ದಾರಿಯಲ್ಲಿ ಮನುಷ್ಯ ಸಂಬಂಧಗಳು ನಲುಗದಿರಲಿ  .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ