ಶುಕ್ರವಾರ, ಮಾರ್ಚ್ 15, 2013

ಒಬ್ಬಂಟಿಯಲ್ಲ ...

ಅಲ್ಲಿಯ  ಮಳೆಗೆ
ಇಲ್ಲಿ
ಒದ್ದೆಯಾಗುವ
ತೃಷೆ
ಅಲ್ಲಿಯ
 ಉರಿಗೆ
ಬೆವರಾಗುವ  ತೃಷೆ ,
 ವಾಸ್ತವ ??!!
ನಿಮ್ಮ
ಊರಿಗೆ
ಮೋಡಗಳು
ಹರಿಯುವುದು
ನಮ್ಮ
ಕೇರಿಯ ಮೇಲೆ..
ಮನೆಯಾಚೆ ನಿಂದು
ರವಿಯ
ಅರಸುತ್ತೇನೆ ಅನುದಿನ,
ನೀ ಹೊಯ್ದ ಬೆಳಕು..
ಅವನದಕ್ಕೆ ಹೋಲಬಹುದು ??
ಕೊಂಚ ಸಾಲ
ಪಡೆಯುವದಷ್ಟೇ  ಕಾರಣ ..

ನಿನ್ನೆಗೆ ಕಣಜ ತುಂಬಿದೆ,
ಎರವಲು ಬೆಳಕಿನ ಸರಕು  ..
ನಿನ್ನೆಸರಲ್ಲಿ ಇಲ್ಲಿ ಉರಿಯಲಿ
ಅನಂತ  ಮಿನುಗು ...

ಆದರು ಚಟ??
ಇಂದು  ಕೂಡ ಆಗಸ
ದಿಟ್ಟಿಸುತ್ತಿರುವೆ  ,

ಎಂದಿನಂತೆ
ಇಂದು
ರವಿ ಕಾಣುತ್ತಿಲ್ಲ :(

ಆಗಸ ದಿಟ್ಟಿಸಿ
ಹಾಗೆ ಕೂತೆ ...
ಬರಿ ಮೊಡಗಳದ್ದೆ
ಸಂತೆ...
ಒಂದಷ್ಟು ಮೋಡಗಳು
ಗುಂಪು ಕಟ್ಟಿ
ಪಿಸುಗುಟ್ಟುತ್ತಿವೆ..
ದ್ವಂದ್ವದ ಮಾತು
ಅರ್ಧಕ್ಕೆ
ನಿನ್ನ
ಸೇರುವ ಆಸೆ.
ಅರ್ಧಕ್ಕೆ
ನನ್ನ
ಸೇರುವ ಆಸೆ ..
.ಒಂದಷ್ಟು
ಬೆಳ್ಳಿಯಂತವು
ನಿಮ್ಮೂರ
ದಾರಿ ಹಿಡಿದವು
ಒಂದಷ್ಟು
ಕಪ್ಪಿನಂತವು
ಇಲ್ಲೇ
ಇಳಿದು
ಭೋರ್ಗರೆದವು  
ಅವಕ್ಕೆ
ನನ್ನ ತೆಕ್ಕೆಗೆ ಇಂಚಿಂಚು  ಇಳಿದು
ನೀ ಹಚ್ಚಿದ
ಬೆಂಕಿ ನಂದಿಸಲು ಶ್ರಮಿಸುವ
ಚಟ
ನಾ
 ಒದ್ದೆಯಾಗುವುದು
ಅವಕ್ಕೆ ಮುಕ್ತಿಯ ದರ್ಶನವಂತೆ !!!


ನಿನ್ನ ಅರಸಿ
ಹೋದ ಬೆಳ್ಳಿಯವಲ್ಲವೇ
ನನ್ನವು ??
ಒದ್ದೆ ಅಸ್ಪರ್ಶ್ಯ
ನಿಮ್ಮೂರ
ಶೆಕೆಗೆ  ಬೆವರಾಗುತ್ತೇನೆ ..
ಅಲ್ಲಿಗೆ  ದುಖಕ್ಕೆ
ಅಮೃತ  ಪಾನ,,
ನೀ ಹಚ್ಚಿಟ್ಟ ಉರಿ
ಚಿರಾಯು ..



ನನ್ನ ಕೇರಿಗೆ
ಇಳಿದ ಕಾರ್ಮೋಡಗಳು ??
ಇಲ್ಲೇ ಅಡ್ಡಡುತ್ತವೆ
ಅವಕ್ಕೆ ಸೋತ ಭಾವ ,,

ಈಗ ನಾನು
ಒಬ್ಬಂಟಿಯಲ್ಲ
ಇಲ್ಲಿ ಒಂದಷ್ಟು
 ಅತ್ರಪ್ತ
ಆತ್ಮಗಳಿವೆ ಮೋಡಗಳವ್ವು ..
ಅವುಗಳಿಗೆ
ಸಾಂತ್ವನವಾಗಿ
ದಿನ ನಿನ್ನ ಕತೆ ಹೇಳುತ್ತೇನೆ


ಈಗ ಆಗಸ
ನೋಡುವುದ ಬಿಟ್ಟಿದೇನೆ
ರವಿಯ ಬೆಳಕು ?
ಮೋಡಗಳ ದಾರಿ ?
ಯಾವುದು ಅರಿಯೆ
ನಿಮ್ಮೊರಿನಲ್ಲಿ ಈಗ ಶೆಕೆಯೋ ??
ಮಂಜ ಹೊದಿಕೆಯೋ ??

ಇಲ್ಲಿ ಸುಡು ಬೇಸಿಗೆ
ಆತ್ಮ ಉರಿಸಿ ಉರಿಸಿ ಇಲ್ಲೊಂದಿಷ್ಟು
ಬೂದಿ ಉಳಿದಿದೆ.
ನಮ್ಮೂರ ನದಿ ಮಾತು ಕೊಟ್ಟಿದೆ!
ನಿನ್ನ ಕಾಲಿಗೆ ಹೇಗಾದರೂ ಆ  ಬೂದಿ
ತಾಕಿಸುವೆನೆಂದು ..
ಹಾಗಾಗೆ ಹಿಂತುರುಗಿ
ನೋಡು :(

ನಿನಗೆ
ನನ್ನ ಹೆಜ್ಜೆ ಗುರುತು
ಕಂಡರೆ
ನನಗೆ
ನನೊಂದಿಗೆ
 ಕಾಯುತ್ತಿರುವ
ಕಾರ್ಮೋಡಗಳಿಗೂ
ಮುಕ್ತಿ .... :(


1 ಕಾಮೆಂಟ್‌: