ಬುಧವಾರ, ಫೆಬ್ರವರಿ 27, 2013

ಹನಿಯಾದರೂ ??

ಏ ಸಂಧ್ಯೆ ನಿನ್ನದು
ಅದೆಂತ  
ವೈಕರಿ ?

ದಿನಲು 
ಅರಳುತ 
ಮರಳಿ ಬಾರುತ,  
ತಂಪ 
ಸುರಿಸುವ 
ನಿತ್ಯ ಐಸಿರಿ .. .. 

ನೀನು ಎರೆವ
ರಾತ್ರಿಗಳು .. .., !
ನಡು ನಡುವಲಿ  
ಕಾಡೋ
ಕನವುಗಳು  .. !!

ನೆನಪ ಕೈ ತುತ್ತಲಿ 
ನಿನ್ನೆಗಳ ಮೆಲುಕು , 

ಮುಂಜಾನೆ ಕಳೆದ
ಇಬ್ಬನಿಗಳ ಕೆದುಕುವ 
ನಿರ್ಗತಿಕ ., 

ಮಣ್ಣಾಗಿದೆ
ಮಂಜ ಹನಿ
ಯಾರ ಕೇಳಲಿ ...??

ಸಂಧ್ಯೆ .,

ನೀ
ಅರಿತಿರುವೆ
ನನ್ನೆದೆಯ ಕೋರ್ಟಿನ
ಅವರಣಗಳಲ್ಲಿ
ನಡುಯುವ ವಾದ
ವಕಾಲತ್ತು ..,
ಒಮ್ಮೆ ಅವಳಿಗೆ
ಜೀವವಾಧಿ
ಒಮ್ಮೆ  ನನಗೆ
ಗಲ್ಲು ...

ಆಂಟಿ ಹರಿವ ನದಿ
ಅವಳು
ನಾನು
ಅವಳ
ನೇವರಿಸಿ ಸತ್ಕರಿಸುವ
ನೆಲ ..,
ಅವಳಿಗೆ ನನ್ನ
ಆವರಿಸಿದ ಅಹಂ
ನನಗೆ ಅವಳ
ನೇವರಿಸಿದ ಅಹಂ ..,

ತಿರುಗಿ
ನೋಡುವಷ್ಟರಲ್ಲಿ
ಅವಳು  ಆವಿ
ನಾನು ಬಿರುಕು
ಭುವಿ ..,

ಅವಳು ಮತ್ತೆ
ಮಳೆಯಗುವಳೇ ?
ಆದರು,
ನನ್ನ ನೆಲವ
ಸೇರುವಳೇ ??
ಭೋರ್ಗರೆತ
ಬೇಡ
ಬೊಗಸೆ
ದಕ್ಕುವುದೇ ?

ಹನಿಯಾದರೂ ??

ಕಾದು ಕುಳಿತಿರುವೆ ...,

ಸಂಧ್ಯೆ..
ನಾಳೆ ಇಲ್ಲಿ ಬರುವ ಮುನ್ನ
ಅಲ್ಲಿ ಹೋಗಿಬಾ
ನನ್ನ ನೆಲದ
ಬಂಜರಿಗೆ
ಅಲ್ಲಿ ಕಣ್ಣಹನಿಯ
ಬಳುವಳಿ ತಾ..
ನೇವರಿಸಿ ನೇವರಿಸಿ
ಹನಿಯ ಮುತ್ತಾಗಿಸಿ
ತಿರುಗಿ ಅವಳಿಗೆ
ಎರೆವೆ ...,



















1 ಕಾಮೆಂಟ್‌: