ಗುರುವಾರ, ಆಗಸ್ಟ್ 7, 2014

ಮತ್ತೆ ಬರೆದೆ ..

ಬರದೆ ಬತ್ತದ 
ಬರೆವಣಿಗೆಯ ಸುತ್ತ ,
ಇಂಗಿ ನುಂಗಿದ 
ಕಂಬನಿಯ ಹುತ್ತ ,
ಮಳೆಗೆ ಜರುಗಿ ,ಮರಳಿ ಕರಗಿ
ಸುರುಳಿ ಸುರುಳಿ 
ಸುತ್ತ ಸತ್ತು ಒರಗಿದೆ , 
ಸತ್ತ ಕನಸ ಪಕ್ಕ ಸರಿಸಿ ,
ಕಾಗಾದದೆಯಲ್ಲಿ  ಇಂಕ ಚೆಲ್ಲಿ,
ಮತ್ತೆ ಬರೆದೆ ,
ಮತ್ತು ಬರೆದೆ ,
 ಬರೆದ ಕರೆಯಲ್ಲಿ 
ಕರೆಯ ಮೊರೆಯಲ್ಲಿ 
ಕಾಲ ಜರುಗಿ,ನೆನಪು ಕರಗಿ 
ಮರಳಿ ಮರಳಿ 
ಹುತ್ತ ಕೆರಳಿದೆ !!




 

ಶುಕ್ರವಾರ, ಜುಲೈ 11, 2014

ಪ್ರಯತ್ನ

ಒಂದು ನೀಳ ಬಿಡುವಿನ ನಂತರ ಮತ್ತೆ ಬರೆಯುವ ಹವ್ಯಾಸಕ್ಕೆ ಜೀವ !!
ಜೀವ,  ಜೀವನ ಪ್ರೀತಿ ಎರಡು ಕೂಡ ಕಣ್ಣ ಮಿಟುಕಿನಂತೆ ಬಂದು ಹೋಗುವ  ಮಾನಸಿಕ ಸ್ಥಿತಿ , ಒಮ್ಮೆ ಬರವಣಿಗೆ ಮನಸಿಗೆ ಮುದ ನೀಡುವ ಪರಿಯ ಅನುಭವ , ಅದರ ಮೆಲುಕು , ಆತ್ಮ ಸಾರ್ಥಕ್ಯದ ತುದಿ ತಲುಪಿಸಿದರೆ ಕೆಲವೊಮ್ಮೆ ಇರದ ಪಾತಾಳಕ್ಕೆ ನಿಂತಲ್ಲೇ ಅದುಮಿ ಛೇದಿಸುತ್ತದೆ  , ಆದರು ಬರೆಯುವುದರಲ್ಲಿ ಅಲೌಕಿಕ ಆನಂದವಿದೆ , ಜೀವದ  ಒಳಗೆ ಕೂತ ದೈವ ಹೊಂಕರಿಸಿ ವಿಜ್ರಮ್ಬಿಸುತ್ತಾನೆ .
ಮನುಜ ಕುಲಕ್ಕೆ ಇರುವ ಅಮರನಾಗುವ  , ಅನಂತನಾಗುವ ತ್ರಷೆಗೆ ಸಾಹಿತ್ಯ,  ಕಲೆ ಇವು ಸುಲಭಕ್ಕೆ ಸಿಗುವ ಮಾರ್ಗಗಳು  . ಇರಲಿ ನಮ್ಮದು  ಒಂದು ಪ್ರಯತ್ನಕ್ಕೆ ಸ್ವಾರ್ಥದ ನಂಟು ಅಂಟಿಬಿಡಲಿ !!!

         
       
ಮೂಲೆಯಲ್ಲಿ ಕೂತು ಸದಾ ಕೂಡ ಕಣ್ಣ ಮುಚ್ಚಿ ಇರದ , ಬಾರದ ದೈವಕ್ಕೆ ಅಭಿನಂದನೆಅರ್ಪಿಸಿ ರಾತ್ರಿ ಮಲಗುತ್ತಿದೆ  , ದೈವ ಹೊರತು ಮತ್ತೆಲ್ಲ ಪಾತ್ರಗಳು  , ಇದ್ದವರು , ಇರುವವುರು ಎಲ್ಲರು . 
ಇರದವರು ಮತ್ತೆ ಬಂದಂತೆ ,  ಇರುವವರು ದೂರವಾದಂತೆ ಕನಸುಗಳು . ದಿನ ಮುಂಜಾನೆ ಕನಸುಗಳ ಮೆಲಕು ಹಾಕಿ ದುಃಖದಲಿ ನೀರಾಗುತ್ತಿದೆ , ಒಮ್ಮೆ ಮಾತ್ರ ಕನಸಲ್ಲಿ ಕಂಡ ಸಂಪೂರ್ಣ ಚಿತ್ರ ಎದೆಯಲ್ಲಿ ಹಾಗೆ ಉಳಿಯಿತು ಎಲ್ಲ ಪಾತ್ರಗಳು ಯಾವುದೋ  ಜೈಲನಲ್ಲಿ ಬಂಧಿಯದಂತೆ  ,ನಾನು ಆ ಸೆರೆಮನೆಯ ಬಾಗಿಲ ಹೊರಗೆ ನಿಂತು ಅವರೊಡನೆ ಸದಾ ಬೇಡುವ ಪರಿ ,ಆ ಪಾತ್ರಗಳು ಬಂಧ ಮುಕ್ತಿಯಗಿಸುವಂತೆ ಕಾಡುವ ಪರಿ ... ಆ ದಿನ ಕನಸ ,  ಭಾವಗಳಲ್ಲಿ ಸೆರೆಮನೆಯ ಬಾಗಿಲ ತೆರೆದು   ನೀಳವಾಗಿ ಅಭ್ಯಸಿಸಿದೆ  .., ಈ  ನಡುವೆ ಕನಸು ಖಾಲಿ ಖಾಲಿ !
ಮೂಲೆಯಲ್ಲಿ  ಕೂತು ದೈವ  ಅಭ್ಯಸಿಸುತ್ತೇನೆ  ಕತ್ತಲ ಹೊರತು ಮತ್ತೇನು ನೆನಪಿರದು ಮುಂಜಾವಿಗೆ, ಅಳುವಿಲ್ಲ ಸರಿ , ಆಸೆಯು ಕೂಡ :( 

 

ಭಾನುವಾರ, ಮಾರ್ಚ್ 16, 2014

ಕಪ್ಪು,!!!

ಇಡಿ ರಾತ್ರಿ ಕಪ್ಪು ಸೋಸುತ್ತಿರುವೆ ..
ಕಣ್ಣ ಮುಚ್ಚಿ ಬಂಧಿ ಮಾಡಿದ ಕಪ್ಪು,
ಸೂರ್ಯ ಮುಳುಗಿ ನಂದಿ ಹೋದ ಕಪ್ಪು,
ದೀಪವಾರಿಸಿ ಉದ್ಬವಿಸಿದ ಕಪ್ಪು,
ಎದೆಯ ಉರಿಸಿ ಉಳಿದ ಕಪ್ಪು,

ಹಲವು ಕಪ್ಪಲ್ಲಿ 
ಕೆಲವು ನನ್ನವು !
ಉಳಿದ ಕಪ್ಪು
ಒಲವು ನಿನ್ನವು ,
ಸೋಸಿ ಜರಡಿ ಮಾಡಿ ಉಳಿದ ಕೆಲವು ,ವಿದಿಯ
ಕಡೆಯವು ...
ದೈವ ಹಡೆದವ್ವು ..,
ಇಡಿ ರಾತ್ರಿ ಕಪ್ಪು ಸೋಸುತ್ತಿರುವೆ...!! 

ಅಂಬಿಗ ತನ್ನ ಹುಟ್ಟು ಮರೆತಿಹ ....

ಯಾವ ಪಯಣದ ಅ೦ಬಿಗ ನೀ
ಯಾವ ನಕ್ಷೆಗೆ ಒಡೆಯನೂ ?
ಸುತ್ತ ಮುತ್ತಕ್ಕೆಲ್ಲ ಹೆಸರು ಬರೆದರೆ 
ಇಹವ ಆಳುವ ಅರಸನೋ...?
ಪೂರ್ವ ಪಶ್ಚಿಮ 
ದಿಕ್ಕು ಹಲವು 
ಎತ್ತ ನಡೆದರೂ ಮಂಪರು ..
ಈಗೆ ನಡೆದು ,
ಹಾಗೆ ನಡೆದು,
ದಣಿದು ತಣಿಯಲು ಮೈಲಿಗಲ್ಲು ...
ನಿಂತ ಜಾಗದಿ ನೆಲವು
ಜರುಗಲು ಮುಂದೆ ಸಾಗಿದೆ
ಪಯಣವು ..?!!
ಉಸಿರ ದೀವಿಗೆ ಉರಿದು ಉರಿದು
ನಿತ್ಯ ಚಾರಣ ಜಾಥವು ...?

ದಾರಿ ತುಳಿದು ,
ದಾರಿ ಸುಲಿದು ,
ಕಾಲ ಸವೆಸಿ ನೋಡಲು ..,
ದಾರಿ ಮರೆತಿದೆ ,
ಊರು ದೊರಕದೆ
ನಕ್ಷೆ ಅರಿದು ಅಳಿಸಿದೆ ..,

ಉಸಿರ ದೀವಿಗೆ ಗಾಳಿಗಾಡಿದೆ,,.
ಸಣ್ಣ ಸಣ್ಣಗೆ ನಡುಕವು ,...
ಅಂಬಿಗ ತನ್ನ ಹುಟ್ಟು
ಮರೆತಿಹ ಮತ್ತೆ
ಇಲ್ಲಿ ಶೈಥಿಲ್ಯವು !!!!!

ಬುಧವಾರ, ಫೆಬ್ರವರಿ 19, 2014

ಈಗೊಂದು ಕನಸು !!!

ಕಾಲಿಗೆ  ಮುಳ್ಳು ಚುಚ್ಚಿದಂತೆ ,  ಇಕ್ಕಳಕ್ಕೆ ಸಿಗಿಸಿ ಎಳೆದು ತೆಗೆದೇ , ರಕ್ತ ಬಾರದು .  ಚುಚ್ಚಿದಂತೆ  ಚೂಪಾದ ನೋವು, ಮತ್ತೆ
ಬೆಳಕಿಗೆ ಕಾಲು  ತೋರಿ ಮುಳ್ಳು  ಹುಡುಕಿದೆ , ಹುಡುಕುತ್ತ , ಹುಡುಕುತ್ತ ಮೇಲೆ ಏರಿ ಎದೆಯ ತಲುಪಿದೆ ... ನೋವು ನಿಲ್ಲದು .. 
ಎದೆಯ ತಲುಪಿದಂತೆ  ಗೊಂದಲ ,  ಬರಿ ಕವಲುಗಳೇ ತುಂಬಿದ ವ್ರತ್ತ !!
ಎಂತದ್ದೋ  ಸದ್ದು ಎಚರಿಸಿದಂತೆ ,  ಭಯಕ್ಕೆ  ಬಿದ್ದೆ , ಯಾವುದೋ ಒಂದು ದಾರಿ ಇಡಿದು ನಡೆಯಾರಮ್ಬಿಸಿದೆ .. 
ಒಂದೇ  ಸಮನೆ ಏರುತ್ತ ಸಾಗಿ ಏದುಸಿರು ಬಿಡುತ್ತ ಬಸವಳಿದೆ , ನಂತರ  ಮುಳ್ಳಿನದು ನೋವು ನೆನಪಾಯಿತು .. ಆದರೆ ಈಗ ಸಂಕಟ  ಉಸಿರ ಮಟ್ಟಿಗೆ ಬಂತು ನಿಂತಿತ್ತು , ಎದೆಯ ಮುಳ್ಳು ಮೊಂಡಾಗಿ ನೋವ  ನೀಡದು .. 

ಅಯ್ಯೊ !! ಮುಳ್ಳ  ಎದರಿಸಿ ಓಡ ನಿಂತು ದಾರಿ ತಪ್ಪಿ ಎತ್ತ ಸಿಲುಕಿದೆ , ಯೋಚಿಸಿ ನಿಂತೇ .. ಈಗ ಬೆಳಕು ಕಾಣದು , ಭೀತಿ 
ನೆತ್ತಿ ಏರಿದಂತೆ , ಮತ್ತದೇ ಸದ್ಧು .. ಇಷ್ಟು ದೂರ ನಡೆವಾಗ ಯಾರೋ ಜೊತೆ ಇದ್ದದು ಈಗ ಒಂಟಿಯಾದಂತೆ , ಸಣ್ಣಗೆ ನಡುಕ ! 
 ಯಾರು !   ಯಾರು ಕಳೆದು ಹೋದದ್ದು ??   ನಾನೇ ಕೇಳಿ ಕೇಳಿ ದಣಿದೆ ..
 ಕತ್ತಲಿಗೆ ಕಣ್ಣು ಕಟ್ಟಿದಂತೆ , ನಿಶಬ್ದ ಶುರುವಾಯಿತು .. 
ದಿಕ್ಕು , ದೆಸೆ ಏನು ಕಾಣದು ಕಾಲುಗಳ ಹೆಜ್ಜೆಯ ಮಾಪನ ಕಷ್ಟ ಸಾದ್ಯ .. 


ಬೆಳಕ್ಕಿದರಷ್ಟೇ  ಅಳತೆ,  ಕತ್ತಲಿಗಾವ ದಿಕ್ಕು ??ಯಾವ  ದಾರಿ ??  ಬೆಳಕು ನೀಡುವ ದ್ವಂದ್ವಗಳು ಇದಾವುದೋ ಶಾಶ್ವತ ಕತ್ತಲಲ್ಲಿ ಕಳೆದು ಹೋಗಿವೆ .. ಕತ್ತಲಿಗೆ ಎಲ್ಲ  ಸಮನಾಗಿಸುವ ಕಲೆ ಹೇಗೆ  ಸಿದ್ದಿಸಿತೊ ?? ಎಲ್ಲವು , ಎಲ್ಲರು ಕಪ್ಪು .. 

ಹೀಗೆ ಉಸಿರ ಸದ್ದು ಮಾತ್ರ ಕೇಳುವ  ದಾರಿಯಲ್ಲಿ (ಮತ್ತಾವ  ಮೈಲಿಗಲ್ಲು  ಕಾಣದಿಲ್ಲಿ !!) ನಡೆದು , ನಡೆದ ದಣಿವ ಊಹಿಸಲು 
ಆಗದ ಅನಿವಾರ್ಯವಾಗಿ ಕಣ್ಣ ರೆಪ್ಪೆಯು ಮುಚಿದೆಯೊ , ತೆರೆದಿದೆಯೋ ಎಂದು ಅರಿಯಲಾಗದೆ ನಡೆವಾಗ , ಹಿಂದೆ ಯಾರೋ ಕಂಡಂತಾಗಿ  ದಿಕ್ಕು ಬದಲಿಸಿ ನೋಡಲು ಕಳೆದ ಸಂಗಾತಿ ಸಿಕ್ಕಂತಿತು .. 

ಅಲ್ಲಿಗೆ ಬೆಳಕು ಹರಿದು ದಾರಿ ಸಣ್ಣಗೆ ತನ್ನ ಮುದ್ರೆಯನ್ನು ಸಣ್ಣಗೆ ಭೂಮಿಗೆ ತಲುಪಿಸಿತ್ತು , ನನ್ನ ಸಂಗಾತಿ, ನನ್ನ ನೆರೆಳು  !!   
ಜೀವಕಂಟಿ ಬರಲು  , ಒಂಟಿನಕ್ಕೆ ಸಾಂತ್ವಾನ ಮನದ ಒಳಗಿನ ದೊರೆಗೆ ಸಾದ್ಯ ಎನಿಸಿ ನಿಟ್ಟುಸಿರು ..!!! 





  

  

ಸೋಮವಾರ, ಡಿಸೆಂಬರ್ 30, 2013

ಮುಪ್ಪು

ಪ್ರತಿದಿನ ಸಂಧ್ಯೆ ಎನ್ನ ಮುತ್ತಿಕ್ಕೊ  ಹೊತ್ತು , ಹೊರಗೆ ಚಾವಣಿಯ ನೆರಳಲ್ಲಿ ಕೂತು ತೂತು ಹೆಂಚುಗಳ ಸಣ್ಣ ಕಿಂಡಿಗಳಲ್ಲಿ ಇಣುಕುವ ಕಿರಣಗಳಿಗೆ ಮೈ ಒಡ್ಡಿ ನೆನಪ ಕಾಯಿಸುತ್ತೇನೆ. ಬದುಕಿನ ಕಾರಣಗಳಿಗೆ ಮುಕ್ತಿ ಹುಡುಕುತ್ತ ಹಲವು ವರುಷ ಕಳೆದಿದೆ ಮುಕ್ತಿ ಅರಸಿ ಹೊಸ್ತಿಲ ದಿಂಬಾಗಿಸಿ ಕಾಲ ಸವೆಸೋ ಕ್ರಿಯೆಗೂ ಮುಪ್ಪಾಗಿದೆ .

ಈ  ನಡುವೆ ನನ್ನಲ್ಲಿ ಒಂದು ಬಗೆಯ ಪಾಪ ಪ್ರಘ್ನೆ ಶಾಶ್ವವತವಾಗಿದೆ  , ನಿನ್ನ ಪ್ರೀತಿ , ನಿನ್ನಲ್ಲಿ ನಾನಾಗುವ ಪ್ರೀತಿಯಾ ಬಗ್ಗೆ  ,

ಅದು ಕೇವಲ , ಇಂದು ನನ್ನ  ಆವರಿಸಿರುವ ಮುಪ್ಪ, ಚಿರಂತನವಾಗಿ  ದೂರವಾಗಿಸುವ ,  ತೀಕ್ಷ್ಣವಾಗಿ   ಸೀಳಿ  ಕಣ್ಣ ಅಂಗಳ ಕೆಮ್ಪಾಗಿಸುವ ಸಾವ ಭಯವ ನಿರಂತರವಾಗಿ ಮಂಕಾಗಿಸಲು  ನನ್ನ ಸ್ವಾರ್ಥ  ಮನದ ಸಂಚ ? ಇರಲಿ .,.
ಈ ನಡುವೆ ಸಣ್ಣ ಸಲಿಗೆಯಲ್ಲಿ ಎನ್ನ ಮಾತಿಗೆಳುಯುವ ಹಲವು ಬೆಂಚುಗಳು ಪಾರ್ಕಿನ ಸುತ್ತ ಕಾಯುತ್ತವೆ , ಅನುದಿನ ಅವುಗಳೆಡೆಗೆ ಬೆನ್ನ ತಾಕಿಸಿ ನಿನ್ನ ಕಥೆ ಹೇಳುತ್ತೇನೆ .
ನಿನ್ನೆಯಲ್ಲೇ   ಬದುಕುವ ನನ್ನ, ಅನಂತ ಭಾವಗಳ ಭಾರ ಹೊರುವ ಬೆಂಚುಗಳಿಗೆ ಏಕತಾನತೆ ಕಾಡದಿರಲೆಂದು ಅನುದಿನ  ಬೆಂಚು ಬದಲಿಸುತ್ತೇನೆ , ಅನುದಿನ ನಾನು ಕತ್ತಲಿಗಂಜಿ ಮನೆಗೆ ಹೊರಡುವಾಗ  ದಾರಿಯುದ್ದ ಒಂದು ನಿಯತಕಾಲಿಕ ಆಲೋಚನೆ,  ಇಡಿ ರಾತ್ರಿ ಆ ಪಾರ್ಕಿನ ಬೆಂಚುಗಳು ಪರಸ್ಪರ ಮಾತಿಗಿಳಿದರೆ  ,  ನನ್ನವಿಚಾರ ಸ್ವಾರಸ್ಯವಾಗಬಹುದು!  ಏಕತಾನವಾದರೆ ?? ಜೀವ ಕಂಪಿಸುತ್ತದೆ , ಪಾರ್ಕು ಬದಲಿಸುವ ಯೋಚನೆ ಮೂಡುತ್ತದೆ .
ಮತ್ತಾರೋ ನನ್ನ ಅರಿತ ಬೆಂಚ ಆರಿಸಿ  ಕೂತು, ನನ್ನ ನೋವ ಕಾವಿಗೆ ಮೈ ಬೆಚ್ಚಗಾಗಿಸಿಕೊಂಡರೆಮ್ಬ ಭಯವು  ಕಾಡುತ್ತದೆ .






ಬುಧವಾರ, ಆಗಸ್ಟ್ 28, 2013

ಮತ್ತೆ ಆರಂಭ ...!!

ಕಳೆದ ನಾಲಕ್ಕು ವಾರಗಳ ಓದಿನ ಭರಕ್ಕೆಒಂದಿಷ್ಟು ಕಾದಂಬರಿ ಜೀರ್ಣವಾಗಿವೆ .

ಸಂಸ್ಕಾರ , ನಿರಾಕರಣ , ಗ್ರಹಣ ,ಮಾಂಡೋವಿ ... ಈಗ ಅವಸ್ಥೆ .. 
ಏನು ತೋಚದೇ , ಏನು ಗೀಚದೆ ಕಳೆದ ತಿಂಗಳುಗಳಲ್ಲಿ ಬದುಕು ಸಣ್ಣದಾಗಿ ಬದಲಾಗಿದೆ ,ಅವಳು ಅಳಿಸಿ ಹೋದ ಬದುಕ ಚಿತ್ರಪಟ ಕಲಸಿದ  ಮಸಿಯ ನಡುವೆ ತಂತಾನೇ ಚಿತ್ರವಾಗುತ್ತಿದೆ , ನಾನು ವಿಸ್ಮಯನಾಗಿದ್ದೇನೆ .  ಕಲೆಗಾರ ಬದುಕಿಗೆ ನಮಿಸಿ ಮತ್ತೆ ಆರಂಭ ...!! 

ಹೊಸ ಕನಸುಗಳು ಬದುಕ ಪಯಣಕ್ಕೆ ಜೊತೆಯಾಗಿವೆ . ಕೆಲವು ದೂರಕ್ಕೆ ಜೊತೆ , ಇನ್ನು ಉಳಿದವು ನಿಮಿಷದ ಆಮಿಷಗಳಿಗೆ ಒರತೆ .
 ಹೇಗೆ ಮರೆಯಲ್ಲಿ ಅರಿಯೆ ,
ಹೇಗೆ ಸರಿಯಲ್ಲಿ ಅರಿಯೆ 
ಜಡತೆ ಅಂಟಿದ ಮನಕ್ಕೆ ,
ಹೇಗೆ ತಿಳಿಸಲಿ ಅರಿಯೆ ,
 ಹೀಗೆ ಕೊರಗುವ ಹಳೆಯ ಜೀವಗಳೆಲ್ಲಎದೆಯ ಯಾವುದೋ ಮೂಲೆಯಲ್ಲಿ ಬಂದಿಯಾಗಿವೆ , ಸದ್ಯಕ್ಕೆ ಅವುಗಳು ಕೂಗಿಗೆ 
ನನ್ನ ತಲುಪುವ  ವೇಗವಿಲ್ಲ ಅಲ್ಲಿಗೆ ಹೊಸ ಪಯಣದ ಹಾದಿಗಳಿಗೆ ನಾನು ಭಾರ ಇಳಿಸಿದ ಸಂಚಾರಿ. 

ಇಲ್ಲಿ ಚಲಿಸುವದಷ್ಟೇ ಸತ್ಯ ಚಲನೆಯೊಂದೇ ಸ್ಥಿರ.  ಜೊತೆಗೆ ಚಲಿಸದವು ಸ್ಥಿರ , ನಿಂತು ಸೊರಗಿದವು ಕಳೆದ ಕಾಲವಷ್ಟ್ತೆ 
....., ಚಲಿಸುವ ವೇಳೆ ಸುತ್ತ  ನೋಡ ಬಾರದೆಂಬ ಒಣ ಪ್ರತಿಜ್ಞೆ ಎಂದಿನಂತೆ , ಅಂಟಿನೆಡೆಗೆ ತಿರಸ್ಕಾರದಿಂದ . ಅಂಟದೆ 
ನಡೆಯಬೇಕಿದೆ ,..., ಮತ್ತೆ ಬದುಕಿನೆಡೆಗೆ  .....,