ಶನಿವಾರ, ಅಕ್ಟೋಬರ್ 12, 2024

September ,,,,


ನಿನ್ನ  ಹಳೆಯ ಫೋನ್ ನಂಬರ್ ಕೂಡ ಮರೆಯಲಾಗದಷ್ಟು ನಿರ್ಗತಿಕ ನಾನು , ಇರಲಿ , ನಿನ್ನ ಮರೆಯು ಪ್ರಯತ್ನಕ್ಕೆ  ತುಂಬು ದಶಕ , ಜಗವ ದಿಕ್ಕರಿಸಿನಿನ್ನ ಪ್ರೀತಿಸಿದ್ದು ಈಗ ಹಳೆಯ ನೆನಪು  ,ಅಸ್ಥಿ ಹುಡುಕುವ ಸಾಹಸಗಳೆಲ್ಲ ಈಗ ನೀರಸ  ,ಮನಸಿನ್ನ ಮನೆಯಲ್ಲಿ ಈಗ ಮೊದಲಿನಂತೆ ಸ್ಮಶಾನಕ್ಕೆ ಮೀಸಲು ಆಯಕಟ್ಟಿನ ಸ್ಥಳವಿಲ್ಲ   ,ಇಡೀ ನಕಾಶೆಯ ತುಂಬಾ ಅಲಲ್ಲಿ ಅಲಲ್ಲಿಕೆಂಪು  ಚುಕ್ಕಿಯಂತೆ ಗೋರಿಗಳು   , ಕೆದುಕುವ ಉಮ್ಮೆದಿ ಮುಂಚಿನಂತಿಲ್ಲ , ನಮ್ಮಿಬರ ಭವಿಷ್ಯ , ಭೂತದಲ್ಲಿ ಮಣ್ಣು ಮಾಡಿ ವಿಳಾಸ ಮರೆತ್ತಿದ್ದೇನೆ .  

ಸೆಪ್ಟೆಂಬರ್ನ ತಿಂಗಳು , ಮೆದುವಾದ ಸೂರ್ಯ , ಪ್ರತಿ ಭಾರಿ ನನಗೆ ಉಸಿರಾಡಲು ಕಷ್ಟವಾಗುವಂತ  ಒಂದು ಜ್ವರ ತಂದಿಡುತ್ತಾನೆ , ಪ್ರತಿ ವರ್ಷ ಅದೇ ಸಮಯಕ್ಕೆ ನಿತ್ರಾಣ ಬೀಳುವ  ನಾನು ನಿನ್ನ ಹುಟ್ಟಿದ ದಿನ ನೆನೆಯುತ್ತೇನೆ , ಬದುಕು ಎಲ್ಲ ರೀತಿಯಲ್ಲೂ ನಾನು ಸೋತೇ  ಎಂದು ನನಗೆ ತಿಳಿ ಹೇಳುವ ದಿನಗಳು , ವರುಷ ಪೂರ್ತಿ , ಬೆಟ್ಟ ಏರಿ ,ಸಾಗರ ದಾಟಿ , ಎಲ್ಲ ಪರಿಧೆಗಳ ಮೀರಿ ನಾನು ಆಕ್ರಮಿಸುವ ಅಷ್ಟು ಆತ್ಮ ವಿಶ್ವಾಸ ಮಂಜಿನ ಹಾಗೆ ಕರುಗುತ್ತದೆ , 

ನಿನ್ನ  ಒಮ್ಮೆ  ಸಿಕ್ಕರೆ ಕೇಳುವುದಿದೆ  ನನಗೆ  ಈ  ಪರಿ ಸೋತ ಭಾವ ಕಾಡುವ  ಹಾಗೆ ನಿನಗೆ ಗೆದ್ದು ಬೀಗಿದ ಅಹಂ ಕಾಯುತ್ತದೆಯಾ? 
ಈ ದಶಕದ ದಾರಿಯಲ್ಲಿ ಅದೆಷ್ಟು ರಾತ್ರಿ ಮತ್ತು ಕನಸಿಗೆ ನಮ್ಮ ಪ್ರೀತಿ ಸಾಯುವ ನಾಟಕದ ಪ್ರಯೋಗವಾಗಿದೆ  , ನೀನು ಕೊಂದಂತೆ , ನಾನು ನೊಂದಂತೆ , ಮತ್ತೆ ಮತ್ತೆ ಹ್ಞೂಕರಿಸಿಮುಗಿಯುವ ಕಥೆಯ ಅಂತ್ಯ ಪ್ರತಿ ಪ್ರಯೋಗದಲ್ಲು ಬದಲಾದನ್ತೆ , ಸುಳ್ಳೆ!! 

ಏನಾದರೇನು ನನ್ನ ಎದೆಯ  ಹೊಸ್ತಿಲ ಮೇಲೆ ಹೊರಮುಖವಾಗಿ ಇಳಿದ ನಿನ್ನ ಪಾದದ ಹಚ್ಚೆಯ ಗುರುತು , ಮತ್ತು ಖಾಲಿ ಮನೆಯ ಮೇಲ್ಚಾವಣಿಯ ಮೇಲಿನ ರಾಶಿ ರಾಶಿ ನಿನ್ನ ನೆನಪಿನ ಬುತ್ತಿ  ಮತ್ತು ಅದ ಅಲಂಕರಿಸಿದ ಜೆಡನ ಕಲಾಕುಸುರಿ  ನನ್ನ ಛೇಡಿಸಿ , ಸಂತೈಸುವುದು ಮಾತ್ರ ನಿತ್ಯ ಸತ್ಯ . 

ಮಾರುಕಟ್ಟೆಯಲ್ಲಿ ನೆನಪಿನ ಶಕ್ತಿಗೆ ಮಾತ್ರೆ ಮಾರುತ್ತಾರೆ , ನಿನಗೆ ಮರೆವಿನ ಔಷದಿಯವ ಪರಿಚಯ ಎಂದು ಗೊತ್ತು , ಅವನ ಪರಿಚಯ ಕಳಿಸು , ನಿನ್ನ  ನೆನಪು ಸುಟ್ಟು , ನಮ್ಮ ಪ್ರೀತಿಗೆ ಮೋಕ್ಷ ಕೊಡಿಸೋಣ ,,,,,




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ